ರಾಜ್ಯದ ಆರ್.ಸಮರ್ಥ್, ಹಾಗೂ ಕೆ.ಗೌತಮ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲವಾಗಿದ್ದಾರೆ.

ಮುಂಬೈ(ಸೆ.11): ನ್ಯೂಜಿಲೆಂಡ್ ‘ಎ’ ವಿರುದ್ಧ ಸೆ.23ರಿಂದ ಆರಂಭಗೊಳ್ಳಲಿರುವ ಎರಡು 4 ದಿನಗಳ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ ತಂಡ ಪ್ರಕಟಿಸಲಾಗಿದ್ದು, ಕರ್ನಾಟಕದ ಕರುಣ್ ನಾಯರ್'ಗೆ ನಾಯಕತ್ವ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನು ರಾಜ್ಯದ ಆರ್.ಸಮರ್ಥ್, ಹಾಗೂ ಕೆ.ಗೌತಮ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲವಾಗಿದ್ದಾರೆ.

ವಿಜಯವಾಡದಲ್ಲಿ ಪಂದ್ಯಗಳು ನಡೆಯಲಿದ್ದು, ಮೊದಲ ಅಭ್ಯಾಸ ಪಂದ್ಯ ಸೆಪ್ಟೆಂಬರ್ 23-26ರವರೆಗೆ ನಡೆಯಲಿದೆ. ಇನ್ನು ಎರಡನೇ ಪಂದ್ಯ ಸೆಪ್ಟೆಂಬರ್ 30-ಅಕ್ಟೋಬರ್ 3ರವರೆಗೆ ನಡೆಯಲಿದೆ.

ತಂಡದ ವಿವರ:

ಕರುಣ್ ನಾಯರ್ (ನಾಯಕ), ಪ್ರಿಯಾಂಕ್ ಪಾಂಚಾಲ್, ಆರ್. ಸಮರ್ಥ್, ಸುದೀಪ್ ಚಟರ್ಜಿ, ಶ್ರೇಯಸ್ ಅಯ್ಯರ್, ಅಂಕಿತ್ ಭಾವ್ನೆ, ಹನುಮ ವಿಹಾರಿ, ರಿಶಭ್ ಪಂತ್, ಶಹಬಾದ್ ನದೀಮ್, ಕೆ. ಗೌತಮ್, ನವ್ದೀಪ್ ಶೈನಿ, ಶಾರ್ದೂಲ್ ಠಾಕೂರ್,ಮೊಹ್ಮದ್ ಸಿರಾಜ್, ಅಂಕಿತ್ ರಜಪೂತ್.