ನಿನ್ನೆ 71 ರನ್ ಗಳಿಸಿದ್ದ ನಾಯರ್, ಇಂದು ಸೆಂಚುರಿ ಮತ್ತು ಡಬಲ್ ಸೆಂಚುರಿ ಸಂಭ್ರಮ ಆಚರಿಸಿಕೊಂಡರು. 306 ಎಸೆತಗಳನ್ನ ಎದುರಿಸಿದ ನಾಯರ್ 23 ಬೌಂಡರಿ, 1 ಸಿಕ್ಸರ್ ಸಹಿತ ದ್ವಿಶತಕ ಸಿಡಿಸಿದರು.
ಚೆನ್ನೈ(ಡಿ.19): ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 5ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್`ಮನ್ ಕರುಣ್ ನಾಯರ್ ಅಮೋಘ ದ್ವಿಶತಕ ಸಿಡಿಸಿದ್ದಾರೆ. ಕೆ. ಎಲ್. ರಾಹುಲ್ ಮಿಸ್ ಮಾಡಿಕೊಂಡದ್ದನ್ನ ನಾಯರ್ ಸಾಧಿಸಿದ್ದಾರೆ. ಜೆನ್ನಿಂಗ್ಸ್ ಎಸೆತವನ್ನ ಬೌಂಡರಿಗಟ್ಟಿದ ನಾಯರ್ 200ರ ಗಡಿ ದಾಟಿ ಸಂಭ್ರಮಿಸಿದರು. ತಾವಾಡುತ್ತಿರುವ 3ನೇ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಕರುಣ್ ನಾಯರ್ ಹೊಸ ದಾಖಲೆ ಬರೆದರು.
ಈ ಮೂಲಕ ಕರುಣ್ ನಾಯರ್, ಮೊದಲ ಶತಕವನ್ನ ದ್ವಿಶತಕವಾಗಿಸಿದ 3ನೇ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ವಿನೋದ್ ಕಾಂಬ್ಳಿ ಮತ್ತು ದಿಲೀಪ್ ಸರ್`ದೇಸಾಯಿ ತಮ್ಮ ಮೊದಲ ಶತಕವನ್ನ ದ್ವಿಶತಕವಾಗಿ ಪರಿವರ್ತಿಸಿದ್ದರು.
ನಿನ್ನೆ 71 ರನ್ ಗಳಿಸಿದ್ದ ನಾಯರ್, ಇಂದು ಸೆಂಚುರಿ ಮತ್ತು ಡಬಲ್ ಸೆಂಚುರಿ ಸಂಭ್ರಮ ಆಚರಿಸಿಕೊಂಡರು. 306 ಎಸೆತಗಳನ್ನ ಎದುರಿಸಿದ ನಾಯರ್ 23 ಬೌಂಡರಿ, 1 ಸಿಕ್ಸರ್ ಸಹಿತ ದ್ವಿಶತಕ ಸಿಡಿಸಿದರು.
ನಿನ್ನೆ ಕನ್ನಡಿಗ ಕೆ.ಎಲ್. ರಾಹುಲ್ 199 ರನ್`ಗೆ ಔಟಾಗುವ ಮೂಲಕ ದ್ವಿಶತಕ ಮಿಸ್ ಮಾಡಿಕೊಂಡಿದ್ದರು.