ಮೊದಲ ಇನಿಂಗ್ಸ್‌ನಲ್ಲಿ 159ರನ್‌ಗಳ ಮುನ್ನಡೆ ಸಾಧಿಸಿರುವ ಸೌರಾಷ್ಟ್ರ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ್ದು, ಎದುರಾಳಿ ಕರ್ನಾಟಕದ 5ನೇ ಜಯಕ್ಕೆ ಅಡ್ಡಿಪಡಿಸುವ ಕಾಯಕದಲ್ಲಿ ನಿರತವಾಗಿದೆ.
ಪಟಿಯಾಲ(ಡಿ.01): ಆರಂಭಿಕ ಆಟಗಾರ ಕುನೈನ್ ಅಬ್ಬಾಸ್ (62) ಮತ್ತು ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ (58) ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ ಕರ್ನಾಟಕ ತಂಡ, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ದ್ವಿತೀಯ ಇನಿಂಗ್ಸ್ನಲ್ಲಿ ಸೌರಾಷ್ಟ್ರ ವಿರುದ್ಧ ಅಲ್ಪ ಮುನ್ನಡೆ ಸಾಧಿಸಿದೆ. ಆರಂಭದಲ್ಲಿ 5 ವಿಕೆಟ್ ಕಳೆದುಕೊಂಡಿರುವ ವಿನಯ್ ಪಡೆ ಸೋಲಿನ ಭೀತಿಯಲ್ಲಿದೆ. ಇನ್ನುಳಿದಿರುವ ಐದು ವಿಕೆಟ್ಗಳನ್ನು ಕಾಯ್ದುಕೊಂಡು ದಿನವೀಡಿ ಬ್ಯಾಟಿಂಗ್ ನಡೆಸಿದರೆ, ಪಂದ್ಯವನ್ನು ಡ್ರಾದತ್ತ ಕೊಂಡೊಯ್ಯಬಹುದಾಗಿದೆ.
ಇಲ್ಲಿನ ಧ್ರುವ್ ಪಾಂಡೋವ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಬಿ’ ಗುಂಪಿನ ರಣಜಿ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ದ್ವಿತೀಯ ಇನಿಂಗ್ಸ್ನಲ್ಲಿ 60 ಓವರ್ಗಳಲ್ಲಿ 5 ವಿಕೆಟ್ಗೆ 168 ರನ್ ಗಳಿಸುವ ಮೂಲಕ ಸೌರಾಷ್ಟ್ರ ವಿರುದ್ಧ 9 ರನ್'ಗಳ ಅತ್ಯಲ್ಪ ಮುನ್ನಡೆ ಪಡೆದಿದೆ. ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಕುನೈನ್ ಅಬ್ಬಾಸ್ 62 ಮತ್ತು ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ಶ್ರೇಯಸ್ ಗೋಪಾಲ್ 15ರನ್ಗಳಿಸಿ ಅಜೇಯರಾಗುಳಿದಿದ್ದು, ಕೊನೆಯ ದಿನಕ್ಕೆ ಭರ್ಜರಿ ಬ್ಯಾಟಿಂಗ್ ನಡೆಸುವ ಉತ್ಸಾಹದಲ್ಲಿದೆ.
ಮೊದಲ ಇನಿಂಗ್ಸ್ನಲ್ಲಿ 159ರನ್ಗಳ ಮುನ್ನಡೆ ಸಾಧಿಸಿರುವ ಸೌರಾಷ್ಟ್ರ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ್ದು, ಎದುರಾಳಿ ಕರ್ನಾಟಕದ 5ನೇ ಜಯಕ್ಕೆ ಅಡ್ಡಿಪಡಿಸುವ ಕಾಯಕದಲ್ಲಿ ನಿರತವಾಗಿದೆ.
ಮುಳುವಾದ ಖಾಜಿ: ಇದಕ್ಕೂ ಮುನ್ನ 6 ವಿಕೆಟ್ಗೆ 297ರನ್ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಸೌರಾಷ್ಟ್ರ ಉಳಿದ 4 ವಿಕೆಟ್ಗಳಿಂದ 62ರನ್ಗಳನ್ನು ಸೇರಿಸಿತು. ಶತಕಗಳಿಸಿ ತಂಡಕ್ಕೆ ಆಸರೆಯಾಗಿದ್ದ ಪ್ರೇರಕ್ ಮಂಕಡ್ (126), ಮಕ್ವಾನ (32), ಜೈ ಚೌಹಾಣ್ ಅಜೇಯ (18), ಜಯದೇವ್ ಉನದ್ಕಟ್ (4) ಮತ್ತು ಜೀವರಜನಿ (1)ರನ್ಗಳಿಸಿದರು. ಎಡಗೈ ಸ್ಪಿನ್ನರ್ ಅಬ್ರಾರ್ ಖಾಜಿ, ಸೌರಾಷ್ಟ್ರದ ಮತ್ತೆರಡು ವಿಕೆಟ್ ಹೆಕ್ಕುವಲ್ಲಿ ಯಶಸ್ವಿಯಾದರು. ಉಳಿದಂತೆ ಬಿನ್ನಿ ಮತ್ತು ಕೆ. ಗೌತಮ್ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಮೊದಲ ಇನಿಂಗ್ಸ್ 64.1 ಓವರ್ಗಳಲ್ಲಿ 200ಕ್ಕೆ ಆಲೌಟ್
ಸೌರಾಷ್ಟ್ರ ಮೊದಲ ಇನಿಂಗ್ಸ್ 115 ಓವರ್ಗಳಲ್ಲಿ 359ಕ್ಕೆ ಆಲೌಟ್
(ಮಂಕಡ್ 126, ಮಕ್ವಾನ 32, ವಿನಯ್ ಕುಮಾರ್ 54ಕ್ಕೆ4)
ಕರ್ನಾಟಕ ದ್ವಿತೀಯ ಇನಿಂಗ್ಸ್ 60 ಓವರ್ಗಳಲ್ಲಿ 5 ವಿಕೆಟ್ಗೆ 168
(ಅಬ್ಬಾಸ್ ಬ್ಯಾಟಿಂಗ್ 62, ಮನೀಶ್ 58, ಮಕ್ವಾನ 46ಕ್ಕೆ3)
