ದ್ವಿತೀಯ ಇನಿಂಗ್ಸ್'ನಲ್ಲಿ ಕೆ. ಗೌತಮ್ ಅವರ ಮಾರಕ ದಾಳಿಗೆ ತತ್ತರಿಸಿದ 41 ಬಾರಿ ರಣಜಿ ಚಾಂಪಿಯನ್ ಮುಂಬೈ ಹೀನಾಯ ಸೋಲು ಕಂಡಿತು.
ನಾಗ್ಪುರ(ಡಿ.11): ಬಲಿಷ್ಟ ಮುಂಬೈ ತಂಡವನ್ನು ಇನಿಂಗ್ಸ್ ಹಾಗೂ 20 ರನ್'ಗಳಿಂದ ಬಗ್ಗು ಬಡಿದ ಕರ್ನಾಟಕ 2017-18ರ ರಣಜಿ ಟ್ರೋಫಿಯಲ್ಲಿ ಸೆಮಿಫೈನಲ್'ಗೆ ಲಗ್ಗೆಯಿಟ್ಟಿದೆ.
ದ್ವಿತೀಯ ಇನಿಂಗ್ಸ್'ನಲ್ಲಿ ಕೆ. ಗೌತಮ್ ಅವರ ಮಾರಕ ದಾಳಿಗೆ ತತ್ತರಿಸಿದ 41 ಬಾರಿ ರಣಜಿ ಚಾಂಪಿಯನ್ ಮುಂಬೈ ಹೀನಾಯ ಸೋಲು ಕಂಡಿತು.
ಮುಂಬೈ ಪರ ಸೂರ್ಯ ಕುಮಾರ್ ಯಾದವ್(108), ಆಕಾಶ್ ಪಾರ್ಕರ್(65) ಹಾಗೂ ಶಿವಂ ದುಬೈ(71) ಹೊರತು ಪಡಿಸಿದಂತೆ ಉಳಿದ ಬ್ಯಾಟ್ಸ್'ಮನ್'ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಕರ್ನಾಟಕ ಪರ ಗೌತಮ್ 104 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಮೊದಲ ಇನಿಂಗ್ಸ್'ನಲ್ಲಿ ಹ್ಯಾಟ್ರಿಕ್'ನೊಂದಿಗೆ 6 ವಿಕೆಟ್ ಪಡೆದಿದ್ದ ನಾಯಕ ವಿನಯ್ ಕುಮಾರ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್:
ಮುಂಬೈ: 173&377
ಕರ್ನಾಟಕ: 570/10
ಫಲಿತಾಂಶ: ಕರ್ನಾಟಕಕ್ಕೆ ಇನಿಂಗ್ಸ್ ಹಾಗೂ 20 ರನ್'ಗಳಿಂದ ಜಯ.
