ಇನ್ನು ಕರ್ನಾಟಕ ಎರಡನೇ ಇನಿಂಗ್ಸ್'ನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದು, ಆರ್. ಸಮರ್ಥ್ 22* ಹಾಗೂ ಕೆಎಲ್ ರಾಹುಲ್ 23* ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಶಿವಮೊಗ್ಗ(ಅ.25): ಯುವ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಸ್ಪಿನ್ ಮೋಡಿಗೆ ತತ್ತರಿಸಿದ ಹೈದರಾಬಾದ್ ಕೇವಲ 136 ರನ್'ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಕರ್ನಾಟಕ 47 ರನ್'ಗಳ ಇನಿಂಗ್ಸ್ ಮುನ್ನಡೆ ಕಾಯ್ದುಕೊಂಡಿತು. ಆ ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಚಹಾ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 45 ರನ್ ಕಲೆ ಹಾಕಿದ್ದು ಒಟ್ಟಾರೆ ಕರ್ನಾಟಕ 92 ರನ್'ಗಳ ಮುನ್ನಡೆ ಸಾಧಿಸಿದೆ.
ಮೊದಲ ದಿನದಂತ್ಯಕ್ಕೆ 53 ರನ್'ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಹೈದರಾಬಾದ್'ಗೆ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ಸುಮಂತ್(68) ಆಸರೆ ಯಾದರು. ಆದರೆ ಕರ್ನಾಟಕದ ಪರ ಮಿಂಚಿನ ದಾಳಿ ನಡೆಸಿದ ಶ್ರೇಯಸ್ ಗೋಪಾಲ್ ಹೈದರಾಬಾದ್ ಬ್ಯಾಟ್ಸ್'ಮನ್'ಗಳನ್ನು ಪೆವಿಲಿಯನ್ ಪರೇಡ್ ನಡೆಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಗೋಪಾಲ್ ಕೇವಲ 17 ರನ್'ಗಳಿಗೆ 5 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು ಕರ್ನಾಟಕ ಎರಡನೇ ಇನಿಂಗ್ಸ್'ನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದು, ಆರ್. ಸಮರ್ಥ್ 22* ಹಾಗೂ ಕೆಎಲ್ ರಾಹುಲ್ 23* ಬ್ಯಾಟಿಂಗ್ ಮುಂದುವರೆಸಿದ್ದಾರೆ.
