ನಾಲ್ಕನೇ ಪಂದ್ಯದಲ್ಲಿ ವಿನಯ್ ತೋರಿದ ಆಲ್ರೌಂಡ್ ಪ್ರದರ್ಶನದಿಂದ ಕರ್ನಾಟಕ ಒಂದು ದಿನ ಬಾಕಿ ಇರುವಂತೆಯೇ 189 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.
ವಡೋದರಾ(ನ.07): ಗಾಯದ ನಿಮಿತ್ತ ಕಳೆದ ಮೂರು ಪಂದ್ಯಗಳಿಗೆ ಅಲಭ್ಯವಾದರೂ, ತಂಡಕ್ಕೆ ಹಿಂದಿರುಗಿದ ಪಂದ್ಯದಲ್ಲಿ ನಾಯಕನಾಗಿ ಭರ್ಜರಿ ಪ್ರದರ್ಶನ ನೀಡಿದ ವಿನಯ್ ಕುಮಾರ್, ರಣಜಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಹ್ಯಾಟ್ರಿಕ್ ಗೆಲುವು ದಾಖಲಿಸಲು ಕಾರಣರಾದರು.
ಇಲ್ಲಿನ ಮೋತಿ ಬಾಗ್ ಕ್ರೀಡಾಂಗಣದಲ್ಲಿ ನಡೆದ ‘ಬಿ’ ಗುಂಪಿನ ತನ್ನ ನಾಲ್ಕನೇ ಪಂದ್ಯದಲ್ಲಿ ವಿನಯ್ ತೋರಿದ ಆಲ್ರೌಂಡ್ ಪ್ರದರ್ಶನದಿಂದ ಕರ್ನಾಟಕ ಒಂದು ದಿನ ಬಾಕಿ ಇರುವಂತೆಯೇ 189 ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಬೌಲಿಂಗ್ನಲ್ಲಿ ತೋರಿದ ದಿಟ್ಟ ಪ್ರದರ್ಶನವನ್ನು ಬ್ಯಾಟಿಂಗ್ನಲ್ಲಿ ತೋರಲು ವಿಫಲವಾದ ವಿದರ್ಭ ಈ ಋತುವಿನ ರಣಜಿಯಲ್ಲಿ ಮೊದಲ ಸೋಲನುಭವಿಸಿತು. ಕಳೆದ ಮೂರು ಪಂದ್ಯಗಳಲ್ಲಿ ಅದು ಡ್ರಾ ಮಾಡಿಕೊಂಡಿತ್ತು.
ಅಗ್ರಸ್ಥಾನ ಭದ್ರ
ಅಂದಹಾಗೆ ಮೊದಲ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ ಡ್ರಾ ಸಾಧಿಸಿದ ಕರ್ನಾಟಕ, ಬಳಿಕ ನಡೆದ ದೆಹಲಿ ಹಾಗೂ ಅಸ್ಸಾಂ ವಿರುದ್ಧ ಗೆಲುವು ಪಡೆದಿತ್ತು. ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಂಡರೂ, ಮೊದಲ ದಿನವೇ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದ ವಿನಯ್, ಆನಂತರದಲ್ಲಿ ದೆಹಲಿ ಮತ್ತು ಅಸ್ಸಾಂ ವಿರುದ್ಧದ ಪಂದ್ಯಗಳಿಗೂ ಅಲಭ್ಯವಾಗಿದ್ದರು. ವಿದರ್ಭ ವಿರುದ್ಧದ ಈ ಗೆಲುವಿನಿಂದ 6 ಪಾಯಿಂಟ್ಸ್ ಕಲೆಹಾಕಿದ ಕರ್ನಾಟಕ, ಒಟ್ಟಾರೆ 23 ಪಾಯಿಂಟ್ಸ್ ಗಳಿಸಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.
ವಿನಯ್ ಅರ್ಧಶತಕ
ಇತ್ತ 3 ವಿಕೆಟ್ಗೆ 108 ರನ್ಗಳೊಂದಿಗೆ ತನ್ನ ಮೂರನೇ ದಿನದಾಟ ಮುಂದುವರೆಸಿದ ಕರ್ನಾಟಕ, ವಿನಯ್ ಕುಮಾರ್ ಅವರ ದಿಟ್ಟ ಬ್ಯಾಟಿಂಗ್ನಿಂದ 58.4 ಓವರ್ಗಳಲ್ಲಿ 209 ರನ್ಗಳಿಗೆ ಆಲೌಟಾದರೂ ಜೈಜ್ ಜಲ್ ಪಡೆಗೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಯಿತು. 45 ರನ್ ಗಳಿಸಿ ಔಟಾಗದೆ ಉಳಿದಿದ್ದ ಆರಂಭಿಕ ಆರ್. ಸಮರ್ಥ್ (45) ಕೇವಲ 2 ರನ್ ಗಳಿಸಿ ತ್ವರಿತಗತಿಯಲ್ಲಿ ಕ್ರೀಸ್ ತೊರೆದರು. ವೇಗಿ ಲಲಿತ್ ಯಾದವ್ ಬೌಲಿಂಗ್ನಲ್ಲಿ ಐಜ್ ಜಲ್ಗೆ ಕ್ಯಾಚಿತ್ತು ಕ್ರೀಸ್ ತೊರೆದರು
ಕೆಳ ಕ್ರಮಾಂಕದಲ್ಲಿ ಜವಾಬ್ದಾರಿಯುತ ಪ್ರದರ್ಶನ ನೀಡಿದ ವಿನಯ್ ಕುಮಾರ್ ಯಶಸ್ವಿ ಅರ್ಧಶತಕದೊಂದಿಗೆ ತಂಡಕ್ಕೆ ನೆರವಾದರು. ಅವರ ಉಪಯುಕ್ತ ಅರ್ಧಶತಕವು ತಂಡದ ಮೊತ್ತವನ್ನು ಗೌರವವಾಗಿಸಿತಲ್ಲದೆ, ವಿದರ್ಭ ಆಟಗಾರರ ಮೇಲೆ ವಿಪರೀತ ಒತ್ತಡ ಹೇರಿತು. ಈ ಮಧ್ಯೆ ವಿನಯ್ ಜತೆಗೆ ಕೆ. ಗೌತಮ್ 22 ರನ್ ಗಳಿಸಿ ರನೌಟ್ ಆಗಿ ಕ್ರೀಸ್ ತೊರೆದರು.
ಸ್ಕೋರ್ ವಿವರ
ಕರ್ನಾಟಕ ಮೊದಲ ಇನ್ನಿಂಗ್ಸ್: 267
ವಿದರ್ಭ ಮೊದಲ ಇನ್ನಿಂಗ್ಸ್: 176
ಕರ್ನಾಟಕ ಎರಡನೇ ಇನ್ನಿಂಗ್ಸ್
58.4 ಓವರ್ಗಳಲ್ಲಿ 209ಕ್ಕೆ ಆಲೌಟ್
ಫಲಿತಾಂಶ: ಕರ್ನಾಟಕಕ್ಕೆ 189 ರನ್ ಗೆಲುವು
ಪಂದ್ಯಶ್ರೇಷ್ಠ: ಆರ್. ವಿನಯ್ ಕುಮಾರ್
