Asianet Suvarna News Asianet Suvarna News

ಸ್ವಹಿತಾಸಕ್ತಿ ವಿವಾದದಲ್ಲಿ ರೆಫ್ರಿ ಅಖಿಲ್

‘ಅಖಿಲ್ ಈಗಷ್ಟೇ ಬಿಸಿಸಿಐ ರೆಫ್ರಿಯಾಗಿದ್ದಾರೆ. ಈ ಕೂಡಲೇ ಅವರನ್ನು ಆಯ್ಕೆ ಸಮಿತಿಯಿಂದ ಕೈ ಬಿಡಲು ಸಾಧ್ಯವಿಲ್ಲ. ಅಖಿಲ್, ಕಿರಿಯರ ವಿಭಾಗದಲ್ಲಿ ಸಾಕಷ್ಟು ಪಂದ್ಯಗಳನ್ನು ವೀಕ್ಷಿಸಿದ್ದು ರಾಜ್ಯ ತಂಡವನ್ನು ಆಯ್ಕೆ ಮಾಡಲಿದ್ದಾರೆ. 

Karnataka Cricketer B Akhil now facing Conflict of Interest
Author
Bengaluru, First Published Oct 1, 2018, 11:27 AM IST

ಬೆಂಗಳೂರು(ಅ.01]: ಕಳೆದ ಶನಿವಾರವಷ್ಟೇ ಬಿಸಿಸಿಐ ಮ್ಯಾಚ್ ರೆಫ್ರಿಯಾಗಿ ಆಯ್ಕೆಯಾಗಿದ್ದ ಕರ್ನಾಟಕದ ಮಾಜಿ ಆಲ್ರೌಂಡರ್ ಅಖಿಲ್ ಬಾಲಚಂದ್ರ ಸ್ವ ಹಿತಾಸಕ್ತಿ ಸಂಘರ್ಷದ ವಿವಾದದಲ್ಲಿ ಸಿಲುಕಿದ್ದಾರೆ. ಅಖಿಲ್ ಸದ್ಯ ಕೆಎಸ್‌ಸಿಎ ಅಂಡರ್ 19 ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಏಕಕಾಲದಲ್ಲಿ 2 ಹುದ್ದೆ ನಿರ್ವಹಿಸುವುದು ಸ್ವಹಿತಾಸಕ್ತಿ ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ. ಈ ಸಂಬಂಧ ಕೆಎಸ್'ಸಿಎಯಲ್ಲಿ ಅಪಸ್ವರ ಕೇಳಿ ಬಂದಿದೆ ಎನ್ನಲಾಗಿದೆ.

‘ಅಖಿಲ್ ಈಗಷ್ಟೇ ಬಿಸಿಸಿಐ ರೆಫ್ರಿಯಾಗಿದ್ದಾರೆ. ಈ ಕೂಡಲೇ ಅವರನ್ನು ಆಯ್ಕೆ ಸಮಿತಿಯಿಂದ ಕೈ ಬಿಡಲು ಸಾಧ್ಯವಿಲ್ಲ. ಅಖಿಲ್, ಕಿರಿಯರ ವಿಭಾಗದಲ್ಲಿ ಸಾಕಷ್ಟು ಪಂದ್ಯಗಳನ್ನು ವೀಕ್ಷಿಸಿದ್ದು ರಾಜ್ಯ ತಂಡವನ್ನು ಆಯ್ಕೆ ಮಾಡಲಿದ್ದಾರೆ. ಆ ಬಳಿಕ ಸಮಿತಿಯಿಂದ ಅಖಿಲ್ ರನ್ನು ಮುಕ್ತಗೊಳಿಸಲಾಗುವುದು’ ಎಂದು ಕೆಎಸ್‌ಸಿಎ ವಕ್ತಾರ ವಿನಯ್
ಮೃತ್ಯುಂಜಯ ‘ಕನ್ನಡಪ್ರಭ’ ಕ್ಕೆ ತಿಳಿಸಿದರು. 

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಖಿಲ್, ‘ಎರಡೂ ಹುದ್ದೆಗಳಲ್ಲೂ ಮುಂದುವರೆಯುತ್ತೇನೆ’ ಎಂದಿದ್ದಾರೆ. ಸೋಮವಾರ ಕೂಚ್ ಬೆಹಾರ್ ಟೂರ್ನಿಗೆ ರಾಜ್ಯ ಕಿರಿಯರ ತಂಡವನ್ನು ಆಯ್ಕೆ ಮಾಡಲು ಸಭೆ ಕರೆಯಲಾಗಿದೆ.

Follow Us:
Download App:
  • android
  • ios