ಸ್ಯಾಂಡಲ್‌ವುಡ್ ಸ್ಟಾರ್ , ಕರ್ನಾಟಕ ರಣಜಿ ಆಟಗಾರರು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟಿಗ ಕರ್ನಾಟಕ ಚಲನ ಚಿತ್ರ ಕಪ್ ಟೂರ್ನಿ 2ನೇ ದಿನಕ್ಕೆ ಕಾಲಿಟ್ಟಿದೆ. ದ್ವಿತೀಯ ದಿನದ ಮೊದಲ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಬೆಂಗಳೂರು(ಸೆ.09): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರು ಕರ್ನಾಟಕ ಚಲನ ಚಿತ್ರ ಟೂರ್ನಿಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ಯಶ್ ನೇತೃತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ಗೆಲುವಿನ ನಗೆ ಬೀರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕತ್ವದ ಗಂಗಾ ವಾರಿಯರ್ಸ್ ತಂಡದ ವಿರುದ್ಧ ಯಶ್ ಸೈನ್ಯ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪುನೀತ್ ತಂಡ 109 ರನ್‌ಗಳಿಸಲಷ್ಟೇ ಸಾಧ್ಯವಾಗಿತ್ತು.

110ರನ್ ಟಾರ್ಗೆಟ್ ಪಡೆದ ಯಶ್ ಸೈನ್ಯ, ಕೇವಲ 7.5 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಸ್ಟಾಲಿನ್ ಹೂವರ್ ಅಜೇಯ 72 ಹಾಗೂ ಕೃಷ್ಣ ಅಜೇಯ 22 ರನ್‌ಗಳ ನೆರವಿನಿಂದ ರಾಷ್ಟ್ರಕೂಟ ತಂಡ ಸುಲಭ ಗೆಲುವು ಸಾಧಿಸಿತು.