ಈ ಟೂರ್ನಿಯಲ್ಲಿ ಮಾಜಿ ಅಂತರಾಷ್ಟ್ರೀಯ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ತಿಲಕರತ್ನೆ ದಿಲ್ಯ್ಯಾನ್, ಓವೈಸ್ ಶಾ, ಹರ್ಷೆಲ್ ಗಿಬ್ಸ್, ಆ್ಯಡಂ ಗಿಲ್’ಕ್ರಿಸ್ಟ್ ಹಾಗೂ ಲ್ಯಾನ್ಸ್ ಕ್ಲೂಸ್ನರ್ ಪಾಲ್ಗೊಳ್ಳುವ ಮೂಲಕ ಆಟದ ರಂಗು ಹೆಚ್ಚಿಸಲಿದ್ದಾರೆ. ಟಿಕೆಟ್ ಬೆಲೆ 50 ರುಪಾಯಿಯಿಂದ 5000 ಸಾವಿರ ರುಪಾಯಿವರೆಗೆ ಇದೆ.
ಬೆಂಗಳೂರು[ಆ.23]: ಬಹುನಿರೀಕ್ಷಿತ ಕರ್ನಾಟಕ ಚಲನಚಿತ್ರ ಕಪ್ ಟೂರ್ನಿ’ಗೆ ಕ್ಷಣಗಣನೆ ಆರಂಭವಾಗಿದ್ದು, ಸ್ಯಾಂಡಲ್’ವುಡ್ ಕಲಾವಿದರು ಕ್ರಿಕೆಟ್ ಆಡಲು ಫೀಲ್ಡಿಗಿಳಿಯಲಿದ್ದಾರೆ. ಇದೇ ಸೆಪ್ಟೆಂಬರ್ 8 ಹಾಗೂ 9ರಂದು ನಗರದ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ಕೆಸಿಸಿ ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಕಿಚ್ಚ ಸುದೀಪ್ ನೇತೃತ್ವದ ಕದಂಬ ಲಯನ್ಸ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಒಡೆಯರ್ ಚಾರ್ಜರ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಇದನ್ನು ಓದಿ:ಕನ್ನಡ ಸಿನಿಮಾ-ಕ್ರಿಕೆಟ್ ಪ್ರೇಮಿಗಳ ಪಾಲಿಗಿದು ಸಿಹಿ ಸುದ್ದಿ..!
ಇನ್ನು ಈ ಟೂರ್ನಿಯಲ್ಲಿ ಮಾಜಿ ಅಂತರಾಷ್ಟ್ರೀಯ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್, ತಿಲಕರತ್ನೆ ದಿಲ್ಯ್ಯಾನ್, ಓವೈಸ್ ಶಾ, ಹರ್ಷೆಲ್ ಗಿಬ್ಸ್, ಆ್ಯಡಂ ಗಿಲ್’ಕ್ರಿಸ್ಟ್ ಹಾಗೂ ಲ್ಯಾನ್ಸ್ ಕ್ಲೂಸ್ನರ್ ಪಾಲ್ಗೊಳ್ಳುವ ಮೂಲಕ ಆಟದ ರಂಗು ಹೆಚ್ಚಿಸಲಿದ್ದಾರೆ. ಟಿಕೆಟ್ ಬೆಲೆ 50 ರುಪಾಯಿಯಿಂದ 5000 ಸಾವಿರ ರುಪಾಯಿವರೆಗೆ ಇದೆ.
ಗೋಲ್ಡನ್ ಸ್ಟಾರ್ ಗಣೇಶ್ ತಂಡದಲ್ಲಿ ದಿಲ್ಯ್ಯಾನ್ ಆಡುತ್ತಿದ್ದರೆ, ಕಿಚ್ಚ ಸುದೀಪ್ ತಂಡದಲ್ಲಿ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ವಿರೇಂದ್ರ ಸೆಹ್ವಾಗ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಪವರ್’ಸ್ಟಾರ್ ಪುನಿತ್ ರಾಜ್’ಕುಮಾರ್ ತಂಡದಲ್ಲಿ ಲ್ಯಾನ್ಸ್ ಕ್ಲೂಸ್ನರ್ ಆಡುತ್ತಿದ್ದರೆ, ಶಿವರಾಜ್ ಕುಮಾರ್ ತಂಡದಲ್ಲಿ ಆ್ಯಡಂ ಗಿಲ್’ಕ್ರಿಸ್ಟ್ ಆಡಲಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ತಂಡದಲ್ಲಿ ಹರ್ಷಲ್ ಗಿಬ್ಸ್, ರಾಕಿಂಗ್ ಸ್ಟಾರ್ ಯಶ್ ತಂಡದಲ್ಲಿ ಓವೈಸ್ ಶಾ ಕಣಕ್ಕಿಳಿಯಲಿದ್ದಾರೆ.
ಪ್ರೇಕ್ಷಕರು ಚಿನ್ನಸ್ವಾಮಿ ಮೈದಾನಕ್ಕೆ ಕ್ರಿಕೆಟ್ ನೋಡಲು ಬನ್ನಿ ಎಂದು ಕನ್ನಡದ ಈ ಎಲ್ಲಾ ಸ್ಟಾರ್ ನಟರು ಆಹ್ವಾನಿಸಿದ್ದಾರೆ.
