ಭುವನೇಶ್ವರ್: ಪುರುಷರ ಹೈಜಂಪ್ ಮೊದಲ ಸುತ್ತಿನಲ್ಲಿ ಕರ್ನಾಟಕದ ಬಿ.ಚೇತನ್ 2.1 ಮೀಟರ್ ನೆಗೆಯುವ ಮೂಲಕ ಫೈನಲ್'ಗೆ ಅರ್ಹತೆ ಪಡೆದಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾರತದ ಮೊತ್ತೊಬ್ಬ ಅಥ್ಲೀಟ್ ಅಜಯ್ ಕುಮಾರ್ ಸಹ 2.1 ಮೀಟರ್ ನೆಗೆದು ಪದಕ ಸುತ್ತಿಗೆ ಪ್ರವೇಶ ಪಡೆದರು. ಮಹಿಳೆಯರ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಕರ್ನಾಟಕದ ಎಂ.ಆರ್.ಪೂವಮ್ಮ ಸೇರಿದಂತೆ ನಿರ್ಮಾಲಾ ಹಾಗೂ ಜಿಶ್ನಾ ಮ್ಯಾಥ್ಯೂ ಫೈನಲ್'ಗೆ ಅರ್ಹತೆ ಪಡೆದಿದ್ದಾರೆ.

ಪುರುಷರ 400 ಮೀಟರ್ ಓಟದಲ್ಲಿ ರಾಜೀವ್ ಆರೋಕಿಯಾ ಹಾಗೂ ಮೊಹಮ್ಮದ್ ಅನಾಸ್ ಫೈನಲ್ ಪ್ರವೇಶಿಸಿದರೆ, ಮಹಿಳೆಯರ 100 ಮೀ ಓಟದಲ್ಲಿ ದೃತಿ ಚಾಂದ್ 11.40 ಸೆಕೆಂಡ್'ನಲ್ಲಿ ಓಟ ಮುಗಿಸುವ ಮೂಲಕ ಅಗ್ರಸ್ಥಾನ ಪಡೆದು ಸೆಮಿಫೈನಲ್'ಗೆ ಲಗ್ಗೆ ಇಟ್ಟರು. ಇನ್ನು, ಪುರುಷರ 1500 ಮೀಟರ್'ನಲ್ಲಿ ಭಾರತದ ಅಜಯ್, ಸಿದ್ಧಾಂತ್ ಫೈನಲ್'ಗೇರಿದರೆ, ಮಹಿಳೆಯರ 1500 ಮೀ ನಲ್ಲಿ ಮೋನಿಕಾ ಹಾಗೂ ಪಿ.ಯು.ಚಿತ್ರಾ ಫೈನಲ್ ಪ್ರವೇಶಿಸಿದರು.