ಈಗಾಗಲೇ ಮೂರು ಗೆಲುವು ಹಾಗೂ ಒಂದು ಡ್ರಾದೊಂದಿಗೆ 'ಎ' ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಆರ್. ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ರಣಜಿ ಪಡೆ ಇದೇ ಲಯವನ್ನು ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿದೆ.
ಬೆಂಗಳೂರು(ನ.13): ಇದೇ ನ. 17 ರಿಂದ 20 ರವರೆಗೆ ಉತ್ತರ ಪ್ರದೇಶ ಮತ್ತು ನ. 25 ರಿಂದ 28 ರವರೆಗೆ ರೈಲ್ವೇಸ್ ವಿರುದ್ಧ ನಡೆಯಲಿರುವ ರಣಜಿ ಪಂದ್ಯಗಳಿಗೆ 15 ಸದಸ್ಯರ ಕರ್ನಾಟಕ ತಂಡ ಪ್ರಕಟಗೊಂಡಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡಕ್ಕೆ ಹಿಂದಿರುಗಿದ ಕೆ.ಎಲ್.ರಾಹುಲ್ ಬದಲಿಗೆ ಡಿ.ನಿಶ್ಚಲ್ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ದೆಹಲಿ ವಿರುದ್ಧದ ಪಂದ್ಯದಲ್ಲಿ ಆಡಿದ ಆಟಗಾರರನ್ನೆ ಉಳಿಸಿಕೊಳ್ಳಲಾಗಿದೆ.
ಈಗಾಗಲೇ ಮೂರು ಗೆಲುವು ಹಾಗೂ ಒಂದು ಡ್ರಾದೊಂದಿಗೆ 'ಎ' ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಆರ್. ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ರಣಜಿ ಪಡೆ ಇದೇ ಲಯವನ್ನು ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿದೆ.
ತಂಡ: ವಿನಯ್ ಕುಮಾರ್ (ನಾಯಕ), ಮಯಾಂಕ್, ಸಮರ್ಥ್, ನಿಶ್ಚಲ್ ಡಿ, ಕರುಣ್, ಮನೀಶ್ ಪಾಂಡೆ, ಬಿನ್ನಿ, ಕೆ. ಗೌತಮ್, ಶ್ರೇಯಸ್ ಗೋಪಾಲ್, ಮಿಥುನ್, ಸಿ.ಎಂ. ಗೌತಮ್, ಪವನ್, ಸುಚಿತ್, ರೋನಿತ್, ಶರತ್ ಶ್ರೀನಿವಾಸ್.