ಮುಂಬೈ[ಫೆ.23]: ಭಾರತ 1983ರ ಏಕದಿನ ವಿಶ್ವಕಪ್‌ ಗೆದ್ದ ಕಥೆ ಬೆಳ್ಳಿ ತೆರೆಯ ಮೇಲೆ ಬರಲು ಸಿದ್ಧಗೊಳ್ಳುತ್ತಿದೆ. ಆದರೆ ಸಿನಿಮಾಕ್ಕೆ ವಿಶ್ವಕಪ್‌ನ ಕಥೆಗಳನ್ನು ಹಂಚಿಕೊಂಡಿದ್ದ ವಿಶ್ವಕಪ್‌ ತಂಡದ ಸದಸ್ಯರು ತಮಗೆ ಸಿಗುತ್ತಿರುವ ಸಂಭಾವನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

24 ವರ್ಷಗಳ ಬಳಿಕ ಭಾರತ ತಂಡ ಪ್ರತಿನಿಧಿಸಲಿದ್ದಾರೆ ಕಪಿಲ್ ದೇವ್!

ವಿಶ್ವಕಪ್ ವಿಜೇತ ತಂಡದಲ್ಲಿದ್ದ 11 ಆಟಗಾರರ ಪೈಕಿ ಸುನಿಲ್‌ ಗವಾಸ್ಕರ್‌ ಹೊರತುಪಡಿಸಿ ಇನ್ನುಳಿದ 10 ಆಟಗಾರರು ಸಿನಿಮಾ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಪ್ರತಿ ಆಟಗಾರರಿಗೆ 15 ಲಕ್ಷ ರುಪಾಯಿ ನೀಡುವುದಾಗಿ ಸಿನಿಮಾ ತಂಡ ತಿಳಿಸಿದೆ. ಆದರೆ ಭಾರತದ ಅತಿದೊಡ್ಡ ಸಂಭ್ರಮದ ಕ್ಷಣಗಳನ್ನು ಕಟ್ಟಿಕೊಡಲು ಈ ಮೊತ್ತ ಕಡಿಮೆಯಾಯಿತು ಎಂದು ಮಾಜಿ ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇಂಗ್ಲೆಂಡ್’ನಲ್ಲಿ ನಡೆದಿದ್ದ 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ಬಾರಿಗೆ ವಿಶ್ವಕಪ್ ಜಯಿಸಿ ಇತಿಹಾಸ ಬರೆದಿತ್ತು. ಇದೀಗ ಕಬೀರ್ ಖಾನ್ ನಿರ್ದೇಶನದಲ್ಲಿ ಐತಿಹಾಸಿಕ ಚಿತ್ರ ಮೂಡಿಬರಲಿದೆ.