ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಾಧನೆ ಕೊಂಡಾಡಿದ ಕಪಿಲ್ ದೇವ್

https://static.asianetnews.com/images/authors/2c1b126a-9adf-5f82-ae4f-e781463685fe.jpg
First Published 27, Jul 2018, 5:31 PM IST
Kapil dev praise Pakistan New Prime Ministers Imran Khan achievement
Highlights

ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್ ಸಾಧನಗೆ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಹೇಳಿದ್ದೇನು? ಇಲ್ಲಿದೆ  ಸಂಪೂರ್ಣ ವಿವರ.

ಮುಂಬೈ(ಜು.27): ಪಾಕಿಸ್ತಾನ ನೂತನ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ, ವಿಶ್ವಕಪ್ ವಿಜೇತ ನಾಯಕ ಇಮ್ರಾನ್ ಖಾನ್ ಆಯ್ಕೆಯಾಗಿದ್ದಾರೆ. ಪ್ರಧಾನಿಯಾಗಿ ಆಯ್ಕೆಯಾದ ಇಮ್ರಾನ್ ಖಾನ್‌ಗೆ ಕ್ರಿಕೆಟ್ ಸ್ನೇಹಿತರು ಶುಭಕೋರಿದ್ದಾರೆ.

ಇದನ್ನು ಓದಿ: ಅಧಿಕಾರಕ್ಕೆ ಬರುವ ಮುನ್ನವೇ ಇಮ್ರಾನ್ ಖಾನ್ ನೀಡಿದ ಆದೇಶವೇನು..?

ಇಮ್ರಾನ್ ಖಾನ್ ವಿರುದ್ಧ ಕ್ರಿಕೆಟ್ ಮೈದಾನದಲ್ಲಿ ಹೋರಾಡಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ಗೆಳೆಯನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ಪ್ರಧಾನಿಯಾಗಿ ಆಯ್ಕೆಯಾಗಿರೋ ಇಮ್ರಾನ್ ಸಾಧನಗೆ ಕಪಿಲ್ ದೇವ್ ಶಹಬ್ಬಾಷ್ ಹೇಳಿದ್ದಾರೆ.

ಇದನ್ನು ಓದಿ: ಪಾಕಿಸ್ತಾನದ ಇಮ್ರಾನ್ ಖಾನ್ ಬಗ್ಗೆ ನಿಮಗೆಷ್ಟು ಗೊತ್ತು?

ಪ್ರಧಾನಿಯಾಗಿ ಆಯ್ಕೆಯಾಗಿರೋ ಇಮ್ರಾನ್ ಖಾನ್ , ಪಾಕಿಸ್ತಾನದ ಅಭಿವೃದ್ಧಿಯ ಹರಿಕಾರನಾಗಲಿ ಎಂದು ಕಪಿಲ್ ದೇವ್ ಶುಭಹಾರೈಸಿದ್ದಾರೆ. ಎಬಿಪಿ ನ್ಯೂಸ್ ಜೊತೆ ಮಾತನಾಡಿದ ಕಪಿಲ್, ಇಮ್ರಾನ್ ಸಾಧನೆಯನ್ನ ಕೊಂಡಾಡಿದ್ದಾರೆ.

ಇದನ್ನು ಓದಿ: ನ್ನ ಮಕ್ಕಳ ತಂದೆ ದೇಶದ ನೂತನ ಪ್ರಧಾನಿ : ಜೆಮಿಮಾ

ಇಮ್ರಾನ್ ಖಾನ್ 25 ವರ್ಷದ ಪರಿಶ್ರಮಕ್ಕೆ ಫಲ ಸಿಕ್ಕಿದೆ. ನೂತನ ಪ್ರಧಾನಿಯಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಉತ್ತಮಗೊಳ್ಳಲಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

loader