ಇಸ್ಲಾಮಾಬಾದ್ : ತಮ್ಮ ಮಾಜಿ ಪತಿ ಇಮ್ರಾನ್ ಖಾನ್ ಪಾಕಿಸ್ತಾನದ ನೂತನ ಪ್ರಧಾನಿಯಾಗುವುದು ಬಹುತೇಕ ಖಚಿತವಾಗುತ್ತಲೇ, ಅವರ ಮಾಜಿ ಪತ್ನಿ ಜೆಮಿಮಾ ಖಾನ್ ‘ನನ್ನ ಮಕ್ಕಳ ತಂದೆ ಪಾಕಿಸ್ತಾನದ ನೂತನ ಪ್ರಧಾನಿ ಎಂದು ಹೇಳಿದ್ದಾರೆ. 

ಈ ಬಗ್ಗೆ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ. ಜೊತೆಗೆ ತಾವು ಯಾವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇನೆ ಎಂಬುದನ್ನು ಇಮ್ರಾನ್ ಮರೆಯದೇ ಇದ್ದರೆ ಒಳಿತು ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.