Asianet Suvarna News Asianet Suvarna News

ಕೋಚ್‌ ಆಯ್ಕೆ: ಕಪಿಲ್‌ ದೇವ್ ಸಮಿತಿಗೆ ಗ್ರೀನ್‌ ಸಿಗ್ನಲ್‌

ಟೀಂ ಇಂಡಿಯಾ ನೂತನ ಕೋಚ್ ಆಯ್ಕೆಗೆ ಇದ್ದ ತೊಡಕು ಬಗೆಹರಿದಿದ್ದು, ಕಪಿಲ್ ದೇವ್ ನೇತೃತ್ವದ ಸಮಿತಿ, ಭಾರತ ತಂಡದ ಕೋಚ್ ಆಯ್ಕೆ ಮಾಡಲಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Kapil Dev Committee gets green signal from BCCI legal team to appoint next coach
Author
New Delhi, First Published Aug 6, 2019, 11:06 AM IST
  • Facebook
  • Twitter
  • Whatsapp

ನವದೆಹಲಿ[ಆ.06]: ಕಪಿಲ್‌ ದೇವ್‌ ನೇತೃತ್ವದ ಕ್ರಿಕೆಟ್‌ ಸಲಹಾ ಸಮಿತಿಗೆ ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಯ್ಕೆ ಮಾಡಲು ಬಿಸಿಸಿಐ ಕಾನೂನು ತಂಡ ಹಸಿರು ನಿಶಾನೆ ತೋರಿದೆ. 

ಕಪಿಲ್‌ ನೇತೃತ್ವದಲ್ಲಿ ಟೀಂ ಇಂಡಿಯಾ ಕೋಚ್‌ ಆಯ್ಕೆ?

ಆಯ್ಕೆ ಸಮಿತಿ ಸದಸ್ಯರಾದ ಕಪಿಲ್‌ ದೇವ್, ಆನ್ಶುಮಾನ್‌ ಗಾಯಕ್ವಾಡ್‌ ಹಾಗೂ ಶಾಂತಾ ರಂಗಸ್ವಾಮಿ ಸ್ವಹಿತಾಸಕ್ತಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸಾಬೀತು ಪಡಿಸಬೇಕಾದ ಅನಿವಾರ್ಯತೆ ಬಿಸಿಸಿಐಗೆ ಎದುರಾಗಿತ್ತು. ಆ ಸಮಸ್ಯೆ ಬಗೆಹರಿದ ಬಳಿಕ, ಸಲಹಾ ಸಮಿತಿಗೆ ಕೋಚ್‌ ಆಯ್ಕೆ ಮಾಡುವ ಅಧಿಕಾರ ಸಿಕ್ಕಿದೆ. 

ಭಾರತ ಕೋಚ್‌ ಹುದ್ದೆಗೆ 2000 ಅರ್ಜಿ; BCCIಗೆ ಅಚ್ಚರಿ!

ಮುಂದಿನ ವಾರ ಅಭ್ಯರ್ಥಿಗಳ ಸಂದರ್ಶನ ನಡೆಸುವ ಸಾಧ್ಯತೆ ಇದೆ ಎಂದು ಸುಪ್ರೀಂ ಕೋರ್ಟ್‌ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ತಿಳಿಸಿದ್ದಾರೆ. ಕೋಚ್ ಸ್ಪರ್ಧೆಯಲ್ಲಿ ಹಾಲಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಮಹೆಲಾ ಜಯವರ್ಧನೆ, ಟಾಮ್ ಮೂಡಿ ಮುಂತಾದ ದಿಗ್ಗಜ ಕ್ರಿಕೆಟಿಗರಿದ್ದು, ಭಾರತ ತಂಡದ ಕೋಚ್ ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ.
 

Follow Us:
Download App:
  • android
  • ios