ಶಮಿ ಮ್ಯಾಚ್ ಫಿಕ್ಸಿಂಗ್ ಆರೋಪ; ಈ ಬಗ್ಗೆ ಕಪಿಲ್ ದೇವ್ ಹೇಳಿದ್ದೇನು..?

Kapil Dev Backs Under Fire Mohammed Shami Slams Match Fixing Allegations
Highlights

ಶಮಿ ಪತ್ನಿ ಹಸೀನಾ ಜಹಾನ್, ತನ್ನ ಪತಿಗೆ ಸಾಕಷ್ಟು ಮಹಿಳೆಯರೊಂದಿಗೆ ವಿವಾಹೇತರ ಸಂಬಂಧವಿದೆ. ಕಳೆದೆರಡು ವರ್ಷಗಳಿಂದ ಶಮಿ ಹಾಗೂ ಆತನ ಕುಟುಂಬ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜಹಾನ್, ಶಮಿ ಮ್ಯಾಚ್ ಫಿಕ್ಸಿಂಗ್ 'ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ನವದೆಹಲಿ(ಮಾ.09): ಕೌಟುಂಬಿಕ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿರುವ ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಮೇಲೆ ಪತ್ನಿ ಮ್ಯಾಚ್ ಪಿಕ್ಸಿಂಗ್ ಆರೋಪ ಹೊರಿಸಿದ್ದಾರೆ. ಪತ್ನಿ ಹೇಳಿಕೆಯಲ್ಲಿ ಹುರುಳಿಲ್ಲ ಎಂದು ಶಮಿ ಪ್ರತಿಕ್ರಿಯೆ ನೀಡಿದ್ದಾರೆ.

ಶಮಿ ಪತ್ನಿ ಹಸೀನಾ ಜಹಾನ್, ತನ್ನ ಪತಿಗೆ ಸಾಕಷ್ಟು ಮಹಿಳೆಯರೊಂದಿಗೆ ವಿವಾಹೇತರ ಸಂಬಂಧವಿದೆ. ಕಳೆದೆರಡು ವರ್ಷಗಳಿಂದ ಶಮಿ ಹಾಗೂ ಆತನ ಕುಟುಂಬ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜಹಾನ್, ಶಮಿ ಮ್ಯಾಚ್ ಫಿಕ್ಸಿಂಗ್ 'ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಶಮಿ ಪತ್ನಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್, ಶಮಿ ಪತ್ನಿ ಮಾಡಿರುವ ಆರೋಪವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಶಮಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದು ಆಕೆಗೆ ಗೊತ್ತಿದ್ದರೆ, ಈ ಮೊದಲು ಯಾಕೆ ತಿಳಿಸಲಿಲ್ಲ. ಸಂಬಂಧ ಚೆನ್ನಾಗಿದ್ದಾಗ ಈ ಬಗ್ಗೆ ಮೌನವಾಗಿದ್ದು, ಈಗ ಆರೋಪ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಒಂದು ವೇಳೆ ಶಮಿ ಪತ್ನಿ ಆರೋಪ ಮಾಡಿದಂತೆ ವೇಗಿ ಫಿಕ್ಸಿಂಗ್ ಮಾಡಿದ್ದೇ ಆದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಶಮಿ ಕಠಿಣ ಪರಿಶ್ರಮದಿಂದ ಮೇಲೆ ಬಂದ ಕ್ರಿಕೆಟಿಗ. ಅವರ ವೈಯುಕ್ತಿಕ ಜೀವನ ಈಗ ಸಂಕಷ್ಟದಲ್ಲಿರುವುದನ್ನು ನಾನೂ ಒಪ್ಪುತ್ತೇನೆ. ಆದರೆ ಆರೋಪ ಸಾಬೀತಾಗುವವರೆಗೂ ಇಂತಹ ಕೀಳು ಆರೋಪಗಳನ್ನು ನಂಬಲು ಸಾಧ್ಯವಿಲ್ಲ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.  

loader