ಕ್ಯಾನಬೆರಾ(ಜೂ.25): ಆಸ್ಟ್ರೇಲಿಯಾ ಫಿಪಾ ವಿಶ್ವಕಪ್ ಟೂರ್ನಿಯಲ್ಲಿ ಹೋರಾಟ ನಡೆಸುತ್ತಿದ್ದರೆ, ಇತ್ತ ಆಸ್ಟ್ರೇಲಿಯಾ ಮಹಿಳಾ ತಂಡಗಳಾದ ಕ್ಯಾಪಿಟಲ್ ಫುಟ್ಬಾಲ್ ಕ್ಲಬ್ ಹಾಗೂ ಬೆಲ್ಕಾನೆನ್ ಯುನೈಟೆಡ್ ತಂಡಗಳು ಮಹತ್ವದ ಪಂದ್ಯ ಆಡುತ್ತಿದೆ. ರೋಚಕ ಪಂದ್ಯದ ಮೊದಲಾರ್ಧ ಇನ್ನೇನು ಅಂತ್ಯವಾಗಬೇಕು ಅನ್ನುವಷ್ಟರಲ್ಲೇ ಕಾಂಗರೂ ದಿಢೀರ್ ಎಂಟ್ರಿ ಕೊಟ್ಟು, ಪಂದ್ಯವನ್ನೇ ನಿಲ್ಲಿಸಿಬಿಟ್ಟಿತು.

 

 

ಬೆಲ್ಕಾನೆನ್ 1-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿತ್ತು. ಇತ್ತ ಕ್ಯಾಪಿಟಲ್ ತಂಡ ಇನ್ನೇನು ಗೋಲು ಬಾರಿಸಬೇಕು ಅನ್ನುವಷ್ಟರಲ್ಲೇ ಪಂದ್ಯ ಸ್ಥಗಿತಗೊಂಡಿತು. ದಿಢೀರ್ ಆಗಿ ಕಾಂಗರೂ ಮೈದಾನಕ್ಕೆ ಲಗ್ಗೆ ಇಟ್ಟಿತು. ಸುಮಾರು ಅರ್ಧ ಗಂಟೆಗಳಷ್ಟು ಕಾಲ ಕಾಂಗರೂ ಮೈದಾನದಲ್ಲಿ ಸುತ್ತಾಡಿತು.

ಮೈದಾನದಲ್ಲೇ ಬೀಡುಬಿಟ್ಟ ಕಾಂಗರೂ ಒಡಿಸಲು ಸಿಬ್ಬಂಧಿ ಒಳಪ್ರವೇಶಿಸಿ ಬೇಕಾಯಿತು. ಸಿಬ್ಬಂಧಿಗಳ ಪ್ರಯತ್ನದಿಂದ ಕಾಂಗರೂ ಮೈದಾನ ಬಿಟ್ಟು ತೆರಳಿತು. ಬಳಿಕ ಪಂದ್ಯ ಆರಂಭಗೊಂಡಿತು.