ಜೈಪುರ[ಏ.29]: ನಾಯಕ ಕೇನ್ ವಿಲಿಯಮ್ಸನ್[63], ಅಲೆಕ್ಸ್ ಹೇಲ್ಸ್[45] ದಿಟ್ಟ ಬ್ಯಾಟಿಂಗ್ ಹೊರತಾಗಿಯೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಸನ್’ರೈಸರ್ಸ್ ಹೖದರಾಬಾದ್ 151 ರನ್ ಕಲೆಹಾಕಿದೆ. ಬಿಗ್ ಬ್ಯಾಶ್ ಪ್ರತಿಭೆ ಜೋಪ್ರಾ ಅರ್ಚರ್ 3 ಕನ್ನಡಿಗ ಕೆ.ಗೌತಮ್ 2 ಹಾಗೂ ಉನಾದ್ಕತ್ ಹಾಗೂ ಇಶ್ ಸೋದಿ ತಲಾ ಒಂದೊಂದು ವಿಕೆಟ್ ಪಡೆದರು.
ಟಾಸ್ ಗೆದ್ದ ಸನ್’ರೈಸರ್ಸ್ ಹೖದರಾಬಾದ್ ಪಡೆಗೆ ಗೌತಮ್ ಆರಂಭದಲ್ಲೇ ಆಘಾತ ನೀಡಿದರು. ಶಿಖರ್ ಧವನ್ 6 ರನ್ ಬಾರಿಸಿ ಗೌತಮ್’ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜತೆಯಾದ ಹೇಲ್ಸ್ ಹಾಗೂ ವಿಲಿಯಮ್ಸನ್ ಭರ್ಜರಿ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಐಪಿಎಲ್’ಗೆ ಪದಾರ್ಪಣೆ ಮಾಡಿದ ಹೇಲ್ಸ್ 45 ರನ್ ಸಿಡಿಸಿ ಗೌತಮ್’ಗೆ ಎರಡನೇ ಬಲಿಯಾದರು.
ಟೂರ್ನಿಯುದ್ದಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ನಾಯಕ ವಿಲಿಯಮ್ಸನ್ 43 ಎಸೆತಗಳಲ್ಲಿ 63 ರನ್ ಚಚ್ಚಿದರು. ಈ ವೇಳೆ ಇಶ್ ಸೋದಿ ಬೌಲಿಂಗ್’ನಲ್ಲಿ ವಿಲಿಯಮ್ಸನ್ ವಿಕೆಟ್ ಕೀಪರ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.
ದಿಢೀರ್ ಕುಸಿದ ಮಧ್ಯಮ ಕ್ರಮಾಂಕ:
ವಿಲಿಯಮ್ಸನ್ ಔಟ್ ಆಗುವಾಗ 15 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು ಹೖದರಾಬಾದ್ 116 ರನ್ ಕಲೆಹಾಕಿತ್ತು. ಈ ಬಳಿಕ ಜೋಪ್ರಾ ಆರ್ಚರ್ ದಾಳಿಗೆ ಕಂಗೆಟ್ಟ ಹೖದರಾಬಾದ್ ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಪರೇಡ್ ನಡೆಸಿದರು. ಶಕೀಬ್, ಯೂಸೂಪ್ ಪಠಾಣ್, ಮನೀಶ್ ಪಾಂಡೆ, ವೃದ್ದಿಮಾನ್ ಸಾಹಾ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾದರು. ಅಂತಿಮವಾಗಿ ಹೖದರಾಬಾದ್ 7 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಿತು.
ಸಂಕ್ಷಿಪ್ತ ಸ್ಕೋರ್:
SRH: 151/7
ಕೇನ್ ವಿಲಿಯಮ್ಸನ್: 63
ಜೋಪ್ರಾ ಆರ್ಚರ್: 26/3
[*ವಿವರ ಅಪೂರ್ಣ]