ನವದೆಹಲಿ(ಅ.03): ಇದೇ ಶುಕ್ರವಾರ (ಅ.7)ದಿಂದ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯುವ ವಿಶ್ವಕಪ್ ಕಬಡ್ಡಿ ಟೂರ್ನಿಯನ್ನು ಪಂಜಾಬ್‌ನಲ್ಲಿ ನಡೆಸುವಂತೆ ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್‌ಗೆ ಪಾಕಿಸ್ತಾನ ಕಬಡ್ಡಿ ಸಂಸ್ಥೆ ಮನವಿ ಮಾಡಿದೆ.
ಉಭಯ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಉರಿಯಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ಉಗ್ರರ ದಾಳಿಯಿಂದಾಗಿ ಯಾವುದೇ ಹಂತದಲ್ಲಿಯಾದರೂ ಯುದ್ಧ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಕಬಡ್ಡಿ ವಿಶ್ವಕಪ್ ಟೂರ್ನಿಯನ್ನು ಮುಂದೂಡಿ ಮುಂದಿನ ತಿಂಗಳು ಮೊದಲ ವಾರದಲ್ಲಿ ಪಂಜಾಬ್‌ನಲ್ಲಿ ನಡೆಸಬೇಕು ಎಂದೂ ಕೇಳಿಕೊಂಡಿದೆ ಎಂದು ಪಾಕಿಸ್ತಾನ ಪತ್ರಿಕೆ ರೋಜ್ನಾಮ್ ದುನ್ಯಾದಲ್ಲಿ ಪ್ರಕಟಿಸಲಾಗಿದೆ.
ಅಂದಹಾಗೆ ವಿಶ್ವಕಪ್ ಕಬಡ್ಡಿಗೆ ಪಾಕಿಸ್ತಾನವನ್ನು ಆಹ್ವಾನಿಸುವುದಿಲ್ಲ ಎಂದು ಭಾರತ ಕಬಡ್ಡಿ ಸಂಸ್ಥೆ ಭಾನುವಾರವಷ್ಟೇ ಹೇಳಿತ್ತು.
