12ನೇ ಶ್ರೇಯಾಂಕಿತ ಶ್ರೀಕಾಂತ್ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯ ಕಂಡಂತಾಗಿದೆ.

ಜರ್ಮನಿ(ಮಾ.03): ಜರ್ಮನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ಭಾರತದ ಯುವ ಆಟಗಾರ ಕಿಡಾಂಬಿ ಶ್ರೀಕಾಂತ್‌'ಗೆ ಭ್ರಮನಿರಸನವಾಗಿದೆ.

ಗುರುವಾರ ತಡರಾತ್ರಿ ನಡೆದ ಪ್ರಿಕ್ವಾರ್ಟರ್‌'ಫೈನಲ್ ಸೆಣಸಾಟದಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್, ಚೀನಾದ ಚೆನ್ ಲಾಂಗ್ ವಿರುದ್ಧ ದಿಟ್ಟ ಹೋರಾಟದ ಹೊರತಾಗಿಯೂ 19-21, 20-22ರ ಎರಡು ನೇರ ಗೇಮ್‌'ಗಳಲ್ಲಿ ಶ್ರೀಕಾಂತ್ ಸೋಲನೊಪ್ಪಿಕೊಂಡರು. 47 ನಿಮಿಷಗಳ ಎರಡೂ ಗೇಮ್‌'ಗಳು ರೋಚಕತೆಯ ಗೂಡಾಗಿತ್ತು. ಆದರೆ, ಆಕ್ರಮಣಕಾರಿ ಚೆನ್ ಲಾಂಗ್, ಕಡೆಗೂ ವಿಜಯಶಾಲಿಯಾದರು.

12ನೇ ಶ್ರೇಯಾಂಕಿತ ಶ್ರೀಕಾಂತ್ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯ ಕಂಡಂತಾಗಿದೆ.