ಪದಕ ಪ್ರದಾನ ಕಾರ್ಯಕ್ರಮದ ವೇಳೆ ಪ್ರೇಕ್ಷಕರು ಗ್ಲ್ಯಾಟ್ಲಿನ್‌'ರನ್ನು ನಾಚಿಕೆಯಿಲ್ಲದವ, ಮೋಸಗಾರ ಎಂದೆಲ್ಲಾ ಹೀಯಾಳಿಸಿದ ಪ್ರಸಂಗ ನಡೆದಿದೆ.

ಲಂಡನ್(ಆ.08): ಜಮೈಕಾದ ವಿಶ್ವವಿಖ್ಯಾತ ಅಥ್ಲೀಟ್ ಉಸೇನ್ ಬೋಲ್ಟ್ ಕೊನೆಯ ಓಟದಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಜಸ್ಟಿನನ್ ಗ್ಲ್ಯಾಟ್ಲಿನ್ ಮತ್ತೊಮ್ಮೆ ಅವಮಾನಕ್ಕೊಳಗಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಲಂಡನ್'ನಲ್ಲಿ ನಡೆದ ವಿಶ್ವ ಅಥ್ಲೇಟಿಕ್ಸ್ ಚಾಂಪಿಯನ್'ಶಿಪ್'ನ 100 ಮೀ. ಓಟದ ಸ್ಪರ್ಧೆಯಲ್ಲಿ ಅಮೆರಿಕಾದ ಜಸ್ಟಿನನ್ ಗ್ಲ್ಯಾಟ್ಲಿನ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಕೊನೆಯ ಓಟದಲ್ಲೂ ಉಸೇನ್ ಬೋಲ್ಟ್ ಗೆಲ್ಲುತ್ತಾರೆ ಎಂದು ಭಾವಿಸಿದ್ದ ಪ್ರೇಕ್ಷಕರಿಗೆ ನಿರಾಸೆ ಎದುರಾಗಿತ್ತು. ಹೀಗಾಗಿ

 ಜಸ್ಟಿನ್ ಗ್ಯಾಟ್ಲಿನ್ ಅವರನ್ನು ಲಂಡನ್ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಮತ್ತೊಮ್ಮೆ ಅವಮಾನಿಸಿದ್ದಾರೆ.

ಪದಕ ಪ್ರದಾನ ಕಾರ್ಯಕ್ರಮದ ವೇಳೆ ಪ್ರೇಕ್ಷಕರು ಗ್ಲ್ಯಾಟ್ಲಿನ್‌'ರನ್ನು ನಾಚಿಕೆಯಿಲ್ಲದವ, ಮೋಸಗಾರ ಎಂದೆಲ್ಲಾ ಹೀಯಾಳಿಸಿದ ಪ್ರಸಂಗ ನಡೆದಿದೆ. ಇದೇ ವೇಳೆ ಕಂಚಿನ ಪದಕ ಗೆದ್ದಿದ್ದ ಉಸೇನ್ ಬೋಲ್ಟ್‌'ಗೆ ಭಾರೀ ಬೆಂಬಲ ದೊರೆತಿದೆ. ಕ್ರೀಡಾಂಗಣದಲ್ಲಿ ಅಭಿಮಾನಿಗಳು ಜಮೈಕಾ ಓಟಗಾರನ ಹೆಸರನ್ನು ಕೂಗುತ್ತಾ ಸಂಭ್ರಮಿಸಿದ್ದಾರೆ. ಉದ್ದೀಪನ ಮದ್ದು ಸೇವನೆಯಿಂದಾಗಿ ಎರಡು ಬಾರಿ ನಿಷೇಧಕ್ಕೊಳಗಾಗಿದ್ದ ಗ್ಲ್ಯಾಟ್ಲಿನ್, 100 ಮೀ. ಓಟ ಗೆದ್ದ ವೇಳೆಯೂ ಪ್ರೇಕ್ಷಕರು ಅವರನ್ನು ಹೀಯಾಳಿಸಿದ್ದರು.