ಜೈಪುರ: ರಾಜಸ್ಥಾನ ರಾಯಲ್ಸ್‌ಗೆ 12ನೇ ಆವೃತ್ತಿಯ ಐಪಿಎಲ್‌ನ ಇನ್ನುಳಿದ ಪಂದ್ಯಗಳಲ್ಲಿ ಜೋಸ್‌ ಬಟ್ಲರ್‌ ಸೇವೆ ಲಭ್ಯವಾಗುವುದಿಲ್ಲ. ನಿರೀಕ್ಷೆಗೂ ಮೊದಲೇ ಅವರ ಪತ್ನಿ ಲೂಸಿ ಮಗುವಿಗೆ ಜನ್ಮ ನೀಡಿದ ಕಾರಣ, ಬಟ್ಲರ್‌ ಇಂಗ್ಲೆಂಡ್‌ಗೆ ತೆರಳಿದ್ದಾರೆ. ಅವರು ಐಪಿಎಲ್‌ಗೆ ವಾಪಸಾಗುವುದಿಲ್ಲ ಎಂದು ತಿಳಿದುಬಂದಿದೆ. 

ವಿಶ್ವಕಪ್ ಟೂರ್ನಿಗೆ ಆತಿಥೇಯ ಇಂಗ್ಲೆಂಡ್ ತಂಡ ಪ್ರಕಟ!

ರಾಯಲ್ಸ್‌ ಪರ ಅತ್ಯುತ್ತಮ ಪ್ರದರ್ಶನ ತೋರಿದ ಬಟ್ಲರ್‌ಗೆ ಇಂಗ್ಲೆಂಡ್‌ ವಿಶ್ವಕಪ್‌ ಪ್ರಾಥಮಿಕ ತಂಡದಲ್ಲಿ ಸ್ಥಾನ ಸಿಕ್ಕಿದೆ. 15 ಸದಸ್ಯರ ತಂಡದಲ್ಲೂ ಬಟ್ಲರ್‌ ಸ್ಥಾನ ಪಡೆಯುವುದು ಬಹುತೇಕ ಖಚಿತ. ಅವರು ಈ ತಿಂಗಳಾಂತ್ಯಕ್ಕೆ ಇಂಗ್ಲೆಂಡ್‌ಗೆ ತೆರಳಬೇಕಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಕೆಲ ದಿನಗಳು ಮುಂಚಿತವಾಗಿಯೇ ಐಪಿಎಲ್‌ಗೆ ಗುಡ್‌ಬೈ ಹೇಳಿದ್ದಾರೆ.

ಮುಂಬೈಗೆ ಮಣ್ಣು ಮುಕ್ಕಿಸಿದ ರಾಜಸ್ಥಾನ

ರಾಜಸ್ಥಾನ ರಾಯಲ್ಸ್ ತಂಡದ ಬಟ್ಲರ್ ಆಡಿದ 8 ಇನ್ನಿಂಗ್ಸ್’ಗಳಲ್ಲಿ 3 ಅರ್ಧಶತಕ ಸಹಿತ 311 ರನ್ ಬಾರಿಸಿದ್ದರು. ಇನ್ನು ಮುಂಬೈ ವಿರುದ್ಧ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಟ್ಲರ್ ಕೇವಲ 43 ಎಸೆತಗಳಲ್ಲಿ 89 ರನ್ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ರಾಜಸ್ಥಾನ ರಾಜಸ್ಥಾನ ತಂಡಕ್ಕೆ ನೂತನ ನಾಯಕ ನೇಮುಕವಾಗಿದ್ದು ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೊದಲು ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದರು.