ಐಸಿಸಿ ನಿಯಮಾವಳಿಯ ಪ್ರಕಾರ, ಆಟಗಾರರು ಯಾವುದೇ ರೀತಿಯ ಸಂದೇಶಗಳನ್ನು ಬಟ್ಟೆ ಅಥವಾ ಆಟದ ಪರಿಕರಗಳ ಮೇಲೆ ಬರೆದುಕೊಳ್ಳುವಂತಿಲ್ಲ.
ಲಂಡನ್[ಜೂ.06]: ಪಾಕಿಸ್ತಾನ ವಿರುದ್ಧದ ಟೆಸ್ಟ್‌ನಲ್ಲಿ ಅಜೇಯ 80 ರನ್ ಬಾರಿಸಿ ಇಂಗ್ಲೆಂಡ್ ಗೆಲುವಿನ ರೂವಾರಿಯಾಗಿದ್ದ ಜೋಸ್ ಬಟ್ಲರ್, ತಮ್ಮ ಬ್ಯಾಟ್‌ನ ಮೇಲ್ಭಾಗದಲ್ಲಿ ಅಶ್ಲೀಲ ಪದವನ್ನು ಬರೆದುಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳ ಟೀಕೆಗೆ ಗುರಿಯಾಗಿರುವ ಬಟ್ಲರ್, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಐಸಿಸಿ ನಿಯಮಾವಳಿಯ ಪ್ರಕಾರ, ಆಟಗಾರರು ಯಾವುದೇ ರೀತಿಯ ಸಂದೇಶಗಳನ್ನು ಬಟ್ಟೆ ಅಥವಾ ಆಟದ ಪರಿಕರಗಳ ಮೇಲೆ ಬರೆದುಕೊಳ್ಳುವಂತಿಲ್ಲ.
18 ತಿಂಗಳ ಬಳಿಕ ಇಂಗ್ಲೆಂಡ್ ರಾಷ್ಟ್ರೀಯ ಟೆಸ್ಟ್ ತಂಡ ಕೂಡಿಕೊಂಡಿರುವ ಜೋಸ್ ಬಟ್ಲರ್ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ಆಡುತ್ತಿದ್ದಾರೆ.
