ಜಾಂಟಿ ರೋಡ್ಸ್ ಬದಲಿಗೆ ನ್ಯೂಜಿಲೆಂಡ್ ಕ್ರಿಕೆಟಿಗ ಜೇಮ್ಸ್ ಪಾಮ್ಮೆಟ್ ಆಯ್ಕೆಯಾಗಿದ್ದಾರೆ.

ಮುಂಬೈ(ಡಿ.08): ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ತಮ್ಮ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ 3 ಬಾರಿ ಚಾಂಪಿಯನ್ ಆಗಲು ಪ್ರಮುಖ ಪಾತ್ರವಹಿಸಿದ್ದ ಜಾಂಟಿ, ವೈಯುಕ್ತಿಕ ಕಾರಣಗಳಿಂದಾಗಿ ಫೀಲ್ಡಿಂಗ್ ಕೋಚ್ ಹುದ್ದೆಯಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ 9 ವರ್ಷಗಳ ಮುಂಬೈ ಇಂಡಿಯನ್ಸ್'ನೊಂದಿಗಿನ ಸಂಬಂಧ ಕೊನೆಯಾದಂತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಾಂಟಿ ರೋಡ್ಸ್ ಬದಲಿಗೆ ನ್ಯೂಜಿಲೆಂಡ್ ಕ್ರಿಕೆಟಿಗ ಜೇಮ್ಸ್ ಪಾಮ್ಮೆಟ್ ಆಯ್ಕೆಯಾಗಿದ್ದಾರೆ.

2009ರಿಂದ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದ ಜಾಂಟಿ, ಯುವ ಕ್ರಿಕೆಟಿಗರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಆಕಾಶ್ ಅಂಬಾನಿ, ಜಾಂಟಿ ರೋಡ್ಸ್ ನಿರ್ಧಾರವನ್ನು ಸ್ವಾಗತಿಸಿದ್ದು 'ಅವರು ತಂಡಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾಗಿದ್ದು, ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.