ಗಾಯದ ಸಮಸ್ಯಯಿಂದಾಗಿ ಬಳಲಿದ್ದ 31 ವರ್ಷದ ಹೇಸ್ಟಿಂಗ್ಸ್ ಇದೀಗ ಕೇವಲ ಟಿ20 ಕ್ರಿಕೆಟ್'ನತ್ತ ಪೂರ್ಣ ಗಮನ ಹರಿಸುವುದಾಗಿ ತಿಳಿಸಿದ್ದಾರೆ.
ಸಿಡ್ನಿ(ಅ.06): ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಜಾನ್ ಹೇಸ್ಟಿಂಗ್ಸ್ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್'ಗೆ ಇಂದು ನಿವೃತ್ತಿ ಘೋಷಿಸಿದ್ದಾರೆ. ಆದರೆ ಟಿ20 ಕ್ರಿಕೆಟ್'ಗೆ ತಾವು ಲಭ್ಯವಿರುವುದಾಗಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಗಾಯದ ಸಮಸ್ಯಯಿಂದಾಗಿ ಬಳಲಿದ್ದ 31 ವರ್ಷದ ಹೇಸ್ಟಿಂಗ್ಸ್ ಇದೀಗ ಕೇವಲ ಟಿ20 ಕ್ರಿಕೆಟ್'ನತ್ತ ಪೂರ್ಣ ಗಮನ ಹರಿಸುವುದಾಗಿ ತಿಳಿಸಿದ್ದಾರೆ.
ಹೇಸ್ಟಿಂಗ್ಸ್ 29 ಏಕದಿನ ಪಂದ್ಯಗಳಲ್ಲಿ 42 ವಿಕೆಟ್ ಪಡೆದಿದ್ದರೆ, 9 ಟಿ20 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್'ಗೂ ಗುಡ್ ಬೈ ಹೇಳಿರುವ ಹೇಸ್ಟಿಂಗ್ಸ್, 75 ಪಂದ್ಯಗಳಲ್ಲಿ 239 ವಿಕೆಟ್ ಕಿತ್ತಿದ್ದಾರೆ.
2016ರಲ್ಲಿ ಎರಡನೇ ಗರಿಷ್ಟ ವಿಕೆಟ್ ಕಿತ್ತ ಸಾಧನೆ ಮಾಡಿದ್ದ ಹೇಸ್ಟಿಂಗ್ಸ್ ಆ ಬಳಿಕ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದರು.