ಇದೇ ಮೊದಲ ಬಾರಿಗೆ ಆ್ಯಷಸ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವ ರೂಟ್, ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಮಣಿಸಲು ನಮ್ಮ ತಂಡ ಸಶಕ್ತವಾಗಿದೆ. 2013-14ರಲ್ಲಿ ನಾವು 5-0 ಅಂತರದಲ್ಲಿ ಆ್ಯಷಸ್ ಸೋತಿರಬಹುದು. ಆ ಬಾರಿ ನಮ್ಮ ತಂಡ ಕಳೆದ ಬಾರಿಗಿಂತ ಭಿನ್ನವಾಗಿದೆ ಎಂದು ತಿಳಿಸಿದ್ದಾರೆ.

ಪರ್ತ್(ಅ.30): ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯನ್ನರ ವಿರುದ್ಧ ಸ್ಲೆಡ್ಜಿಂಗ್‌'ಗೆ ಸಿದ್ಧರಾಗಿದ್ದೇವೆ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆ್ಯಷಸ್ ಸರಣಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾನುವಾರ ಆಸ್ಟ್ರೇಲಿಯಾಕ್ಕೆ ತಂಡದೊಂದಿಗೆ ಬಂದಿಳಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೂಟ್, ‘ಉಪನಾಯಕ ಬೆನ್‌'ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯನ್ನರನ್ನು ಎದುರಿಸಲು ಸಜ್ಜಾಗಿದ್ದೇವೆ. ಯಾವುದೇ ಹಂತದ ಮಾತಿನ ಚಕಮಕಿಗೆ ನಾವು ಸಿದ್ಧರಿದ್ದೇವೆ. ಆಸೀಸ್ ಸೋಲಿಸಲು ವಿಶೇಷ ಯೋಜನೆ ರೂಪಿಸಿದ್ದೇವೆ’ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ಆ್ಯಷಸ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವ ರೂಟ್, ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಮಣಿಸಲು ನಮ್ಮ ತಂಡ ಸಶಕ್ತವಾಗಿದೆ. 2013-14ರಲ್ಲಿ ನಾವು 5-0 ಅಂತರದಲ್ಲಿ ಆ್ಯಷಸ್ ಸೋತಿರಬಹುದು. ಆ ಬಾರಿ ನಮ್ಮ ತಂಡ ಕಳೆದ ಬಾರಿಗಿಂತ ಭಿನ್ನವಾಗಿದೆ ಎಂದು ತಿಳಿಸಿದ್ದಾರೆ.

ನ. 23ರಿಂದ ಪ್ರತಿಷ್ಠಿತ ಆ್ಯಷಸ್ ಸರಣಿ ಆರಂಭಗೊಳ್ಳಲಿದೆ.