ಬೊಲಾಗ್ನ(ಅ.06): ಭಾರತದ ಪ್ರಮುಖ ಶೂಟರ್ ಜಿತು ರೈ ರಿಯೊ ಒಲಿಂಪಿಕ್ಸ್‌ನಲ್ಲಿ ಅನುಭವಿಸಿದ ಪಕದ ವೈಫಲ್ಯವನ್ನು ಮೆಟ್ಟಿನಿಂತು ಐಎಸ್‌ಎಸ್‌ಎಫ್ ವಿಶ್ವ ಕಪ್ ಫೈನಲ್‌ನ 50 ಮೀ. ಪಿಸ್ತೂಲ್ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಸ್ಪರ್ಧಾವಳಿಯಲ್ಲಿ ಏಳನೇ ಶ್ರೇಯಾಂಕ ಪಡೆದಿರುವ ಜಿತು ರೈ, ಅರ್ಹತಾ ಸುತ್ತಿನಲ್ಲಿ 568 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟರು.
ಫೈನಲ್‌ನಲ್ಲಿ ಚೀನಾದ ವೀ ಪ್ಯಾಂಗ್ (190.6 ಪಾಯಿಂಟ್ಸ್) ನಂತರದ ಸ್ಥಾನ ಪಡೆದ ಜಿತು ಬೆಳ್ಳಿ (188.8 ಪಾಯಿಂಟ್ಸ್) ಪದಕಕ್ಕೆ ತೃಪ್ತರಾದರು.
ಇನ್ನು 170.3 ಪಾಯಿಂಟ್ಸ್ ಕಲೆಹಾಕಿದ ಇಟಲಿಯ ಗ್ಯುಸೆಪ್ಪಿ ಗಿಯಾರ್ಡಾನೊ ಕಂಚಿನ ಪದಕಕ್ಕೆ ತೃಪ್ತರಾದರು.
