ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕ ಬೇಟೆ ಮುಂದುವರಿದಿದೆ. ಸದ್ಯ 20 ಪದಕ ಗೆದ್ದಿರುವ ಭಾರಯೀ ಸ್ಪರ್ಧಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಅಪಿಯಾ (ಸಮೊವಾ): ಯೂತ್‌ ಒಲಿಂಪಿಕ್ಸ್‌ ಚಿನ್ನ ವಿಜೇತ ಜೆರ್ಮಿ ಲಾಲ್ರಿನ್ನುಂಗ, ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ವೇಟ್‌ ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನ 67ಕೆ.ಜಿ. ವಿಭಾಗದಲ್ಲಿ 136 ಕೆಜಿ ಭಾರ ಎತ್ತುವ ಮೂಲಕ ಯೂತ್‌ ವಿಶ್ವ, ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ದಾಖಲೆಗಳನ್ನು ಮುರಿದಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಚಿನ್ನ ಗೆದ್ದು ಇತಿಹಾಸ ಬರೆದ ದ್ಯುತಿ ಚಾಂದ್

ಆದರೆ ಕ್ಲೀನ್‌ ಮತ್ತು ಜರ್ಕ್ನಲ್ಲಿ ಭಾರ ಎತ್ತುವಲ್ಲಿ ವಿಫಲರಾಗಿ ಪದಕದಿಂದ ವಂಚಿತರಾಗಿದ್ದಾರೆ. 3ನೇ ದಿನವಾದ ಗುರುವಾರ ಭಾರತದ ಸ್ಪರ್ಧಿಗಳು 7 ಪದಕ ಗೆದ್ದರು. 4 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿದೆ. ಭಾರತದ ಸ್ಪರ್ಧಿಗಳು ಮೊದಲ ದಿನ 13 ಪದಕ ಹಾಗೂ 2ನೇ ದಿನ 7 ಚಿನ್ನ ಗೆದ್ದಿದ್ದರು.