20 ವರ್ಷದ ಆಟಗಾರ್ತಿ ಜೆಲೆನಾ ಆಸ್ಟಪೆನ್ಕೊ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌'ನಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು.

ಪ್ಯಾರೀಸ್(ಜೂ.10): ವಿಶ್ವದ ಮೂರನೇ ಶ್ರೇಯಾಂಕಿತೆ ರೋಮಾನಿಯಾದ ಸಿಮೊನಾ ಹಾಲೆಪ್ ಎದುರು ಆಕ್ರಮಣಕಾರಿ ಆಟವಾಡಿದ ಲ್ಯಾಟ್ವಿಯಾದ 20 ವರ್ಷದ ಆಟಗಾರ್ತಿ ಜೆಲೆನಾ ಆಸ್ಟಪೆನ್ಕೊ ಫ್ರೆಂಚ್ ಓಪನ್ ಗ್ರ್ಯಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌'ನಲ್ಲಿ ಚೊಚ್ಚಲ ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು.

Add Asianetnews Kannada as a Preferred SourcegooglePreferred

ಈ ಮೂಲಕ ಶ್ರೇಯಾಂಕಿತ ಆಟಗಾರ್ತಿಯೊಬ್ಬರು ಗ್ರ್ಯಾಂಡ್'ಸ್ಲಾಮ್ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿದರು.

ಇಲ್ಲಿನ ರೋಲಾಂಡ್ ಗಾರೋಸ್‌'ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಕಾದಾಟಯಲ್ಲಿ ಲ್ಯಾಟ್ವಿಯಾದ ಆಸ್ಟಪೆನ್ಕೊ 4-6, 6-4, 6-3ರ ನೇರ ಸೆಟ್‌'ಗಳಿಂದ ರೋಮಾನಿಯಾದ ಹಾಲೆಪ್ ಎದುರು ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಸೆಮೀಸ್‌'ನಲ್ಲಿ ಸ್ವಿಜರ್‌'ಲೆಂಡ್‌'ನ ಟಿಮಿಯಾ ಬ್ಯಾಕ್ ಸಿನ್‌ಸ್ಕೈ ಎದುರು ಗೆಲುವು ಸಾಧಿಸಿ ಆಸ್ಟಪೆನ್ಕೊ ಫೈನಲ್‌'ಗೆ ಲಗ್ಗೆ ಇಟ್ಟಿದ್ದರು.