ಆಧುನಿಕ ಕ್ರಿಕೆಟ್ ಕಾಲಘಟ್ಟದಲ್ಲಿ ಜಯವರ್ಧನೆ ಒಬ್ಬ ಅದ್ಭುತ ಕ್ರಿಕೆಟಿಗ. ಮುಂಬೈ ಇಂಡಿಯನ್ಸ್ ತಂಡದ ಯುವ ಕ್ರಿಕೆಟಿಗರಿಗೆ ಮಹೇಲಾ ಒಳ್ಳೆಯ ರೋಲ್ ಮಾಡೆಲ್ ಆಗಲಿದ್ದಾರೆ- ನೀತಾ ಅಂಬಾನಿ

ಮುಂಬೈ(ನ.18): ಮುಂಬರುವ ಐಪಿಎಲ್ ಟೂರ್ನಿಗೆ ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ನೇಮಕವಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಮೊದಲು ಕಳೆದ ಎರಡು ಆವೃತ್ತಿಯಲ್ಲೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಸೀಸ್ ಕ್ರಿಕೆಟಿಗ ರಿಕಿ ಪಾಂಟಿಂಗ್ ಮಾರ್ಗದರ್ಶನ ನೀಡುತ್ತಿದ್ದರು.

ಆಧುನಿಕ ಕ್ರಿಕೆಟ್ ಕಾಲಘಟ್ಟದಲ್ಲಿ ಜಯವರ್ಧನೆ ಒಬ್ಬ ಅದ್ಭುತ ಕ್ರಿಕೆಟಿಗ. ಮುಂಬೈ ಇಂಡಿಯನ್ಸ್ ತಂಡದ ಯುವ ಕ್ರಿಕೆಟಿಗರಿಗೆ ಮಹೇಲಾ ಒಳ್ಳೆಯ ರೋಲ್ ಮಾಡೆಲ್ ಆಗಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಒಡತಿ ನೀತಾ ಅಂಬಾನಿ ಹೇಳಿದ್ದಾರೆ.

ನನ್ನ ಪಾಲಿಗೆ ಇದೊಂದು ಹೊಸ ಅಧ್ಯಾಯ, ಇದನ್ನು ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಶ್ರೀಲಂಕಾ ಮಾಜಿ ನಾಯಕ ಜಯವರ್ಧನೆ ಹೇಳಿದ್ದಾರೆ.