ಬುಮ್ರಾ ಟೀಂ ಇಂಡಿಯಾದ ಪ್ರತಿಭಾನ್ವಿತ ವೇಗಿಯಾಗಿ ಕಂಗೊಳಿಸುತ್ತಿದ್ದು, ಸೀಮಿತ ಓವರ್'ಗಳ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಬುಮ್ರಾ ಇದುವರೆಗೂ ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಿಲ್ಲ.
ನವದೆಹಲಿ(ನ.19): ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಸಿಕ್ಸ್ ಪ್ಯಾಕ್'ನಲ್ಲಿ ಮಿಂಚುತ್ತಿರುವ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.
ತಮ್ಮ ಸಿಕ್ಸ್ ಪ್ಯಾಕ್ ಫೋಟೋವನ್ನು ಟ್ವೀಟ್ ಮಾಡಿರುವ ಬುಮ್ರಾ, ‘ಕಠಿಣ ಪರಿಶ್ರಮದಿಂದ ಇದು ಸಾಧ್ಯ’ ಎಂದು ಬರೆದಿದ್ದಾರೆ. ನಾಯಕ ವಿರಾಟ್ ಕೊಹ್ಲಿಯಿಂದ ಸ್ಫೂರ್ತಿ ಪಡೆದಿರುವ ಟೀಂ ಇಂಡಿಯಾ ಆಟಗಾರರು ಒಬ್ಬರಾದ ಬಳಿಕ
ಒಬ್ಬರಂತೆ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದು, ಜಿಮ್'ನಲ್ಲಿ ಹೆಚ್ಚು ಬೆವರು ಹರಿಸುತ್ತಿದ್ದಾರೆ. ಹಾಲಿ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಆಡದಿದ್ದರೂ ಮೈದಾನದಾಚೆಗೆ ಬುಮ್ರಾ ಸಾಕಷ್ಟು ಮಿಂಚು ಹರಿಸುತ್ತಿದ್ದಾರೆ.
It takes dedication and hardwork to consistently improve yourself.💪💪 #stayfit #RaiseTheBar
A post shared by jasprit bumrah (@jaspritb1) on
ಬುಮ್ರಾ ಟೀಂ ಇಂಡಿಯಾದ ಪ್ರತಿಭಾನ್ವಿತ ವೇಗಿಯಾಗಿ ಕಂಗೊಳಿಸುತ್ತಿದ್ದು, ಸೀಮಿತ ಓವರ್'ಗಳ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಬುಮ್ರಾ ಇದುವರೆಗೂ ಟೆಸ್ಟ್ ಕ್ರಿಕೆಟ್'ಗೆ ಪದಾರ್ಪಣೆ ಮಾಡಿಲ್ಲ.