Asianet Suvarna News Asianet Suvarna News

ಭಾರತ ವಿರುದ್ಧದ ಸರಣಿಗೂ ಮುನ್ನ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್‌ಗೆ ವಿಶ್ರಾಂತಿ

ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿ ಆಗಸ್ಟ್ ತಿಂಗಳಿನಿಂದ ಆರಂಭಗೊಳ್ಳಲಿದೆ. ಮಹತ್ವದ ಸರಣಿಗೂ ಮುನ್ನ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್‌ಗೆ ವಿಶ್ರಾಂತಿ ನೀಡಿರೋದ್ಯಾಕೆ ಗೊತ್ತಾ?
 

james Anderson to have six-week break ahead of India series

ಇಂಗ್ಲೆಂಡ್(ಜೂನ್.10): ಗಾಯದ ಸಮಸ್ಯೆಗೆ ತುತ್ತಾಗಿರುವ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್‌ಗೆ 6 ವಾರಗಳ ವಿಶ್ರಾಂತಿ ನೀಡಲಾಗಿದೆ. ಕೌಂಟಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದ ಜೇಮ್ಸ್ ಆ್ಯಂಡರ್ಸನ್‌ ಇಂಜುರಿಗೆ ತುತ್ತಾಗಿದ್ದರು. ಆದರೆ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಆ್ಯಂಡರ್ಸನ್‌ ಕೌಂಟಿ ಪಂದ್ಯಗಳಲ್ಲಿ ಬ್ಯೂಸಿಯಾಗಿದ್ದಾರೆ.  ಹೀಗಾಗಿ ಆ್ಯಂಡರ್ಸನ್‌ಗೆ ವಿಶ್ರಾಂತಿ ನೀಡಲಾಗಿದೆ ಎಂದು ವೇಲ್ಸ್ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿದೆ.

ಆಗಸ್ಟ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. 35 ವರ್ಷದ ಆ್ಯಂಡರ್ಸನ್‌ ಇಂಗ್ಲೆಂಡ್ ತಂಡದ ಪ್ರಮುಖ ವೇಗಿಯಾಗಿರೋದರಿಂದ ವಿಶ್ರಾಂತಿಗೆ ಸೂಚಿಸಲಾಗಿದೆ.  ವಿಶ್ರಾಂತಿಯಿಂದ ಆ್ಯಂಡರ್ಸನ್‌ ಮುಂಬರುವ 2 ಕೌಂಟಿ  ಪಂದ್ಯಗಳನ್ನ ಮಿಸ್ ಮಾಡಿಕೊಳ್ಳಲಿದ್ದಾರೆ. 

ಭಾರತ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿ ಇರೋದರಿಂದ, ವೇಗಿಗಳು ಇಂಜುರಿ ಸಮಸ್ಯೆಯಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕಿದೆ. ಸುಮಾರು 6 ವಾರಗಳ ಕಾಲ ನಡೆಯುವ ಟೆಸ್ಟ್ ಸರಣಿ ಆತಿಥೇಯ ಇಂಗ್ಲೆಂಡ್ ತಂಡಕ್ಕೂ ಸವಾಲಾಗಿದೆ ಎಂದು ಕೋಚ್ ಟ್ರಾವೋರ್ ಬೈಲಿಸ್ ಹೇಳಿದ್ದಾರೆ.

ಆ್ಯಂಡರ್ಸನ್‌ಗ 138 ಟೆಸ್ಟ್ ಪಂದ್ಯಗಳಿಂದ 540 ವಿಕೆಟ್ ಪಡೆದಿದ್ದಾರೆ. ಭಾರತ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿರುವ ಆ್ಯಂಡರ್ಸನ್‌ ಈ ಬಾರಿಯೂ ಅದೇ ಪ್ರದರ್ಶನ ಮುಂದುವರಿಸೋ ವಿಶ್ವಾಸದಲ್ಲಿದ್ದಾರೆ.
 

Follow Us:
Download App:
  • android
  • ios