ಕ್ರೊವೇಷಿಯಾ ಗೆದ್ದರೆ ಹಣೆ ಮೇಲೆ ಟ್ಯಾಟು: ಇವಾನ್ ರಕಿಟಿಚ್ ಘೋಷಣೆ

Ivan Rakitic claims he will have trophy tattooed on his forehead if Croatia beat France in final
Highlights

ಫಿಫಾ ವಿಶ್ವ ಫುಟ್ಬಾಲ್ ಟೂರ್ನಿಗಾಗಿ ಅಭಿಮಾನಿಗು ತಮ್ಮ ನೆಚ್ಚಿನ ತಂಡದ ಬೆಂಬಲಕ್ಕಾಗಿ ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ತಮ್ಮ ತಂಡದ ಬಣ್ಣ ಬಳಿದು ಕ್ರೀಡಾಂಗಣದಲ್ಲಿ ಹಾಜರಾಗ್ತಾರೆ. ಇದೀಗ ಸ್ವತ ಕ್ರೊವೇಷಿಯಾ ಫುಟ್ಬಾಲ್ ಪಟು ತಮ್ಮ ತಂಡ ಗೆದ್ದರೆ, ಟ್ಯಾಟು ಹಾಕಿಸಿಕೊಳ್ಳೋದಾಗಿ ಹೇಳಿದ್ದಾರೆ. ಆ ಫುಟ್ಬಾಲ್ ಪಟು ಯಾರು? ಇಲ್ಲಿದೆ ವಿವರ.
 

ಮಾಸ್ಕೋ(ಜು.15): ಕ್ರೊವೇಷಿಯಾ ತಂಡ ಗೆಲ್ಲಲಿ ಎಂಬ ಅಭಿಮಾನಿಗಳ ಪ್ರಾರ್ಥನೆ ಜೋರಾಗಿದೆ. ಅಭಿಮಾನಿಗಳ ಜೊತೆಗೆ ಇದೀಗ ಕ್ರೊವೇಷಿಯಾ ತಂಡ ಕೂಡ ಗೆಲುವಿಗಾಗಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಇಷ್ಟೇ ಅಲ್ಲ ಕ್ರೊವೇಷಿಯಾ ತಂಡ ಈ ಬಾರಿ ಫಿಫಾ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದರೆ, ಹಣೆ ಮೇಲೆ ಟ್ಯಾಟು ಹಾಕಿಸಿಕೊಳ್ಳುತ್ತೇನೆ ಎಂದು ಕ್ರೊವೇಷಿಯಾದ ಮಿಡ್‌ಫೀಲ್ಡರ್ ಇವಾನ್ ರಕಿಟಿಚ್ ಹೇಳಿದ್ದಾರೆ.

ಹಣೆ ಮೇಲೆ ವಿಶ್ವಕಪ್ ಚಾಂಪಿಯನ್ಸ್-2018 ಎಂದು ಟ್ಯಾಟು ಹಾಕಿಸಿಕೊಳ್ಳುತ್ತೇನೆ ಎಂದಿರು ಇವಾನ್, ಗೆಲುವಿಗಾಗಿ ಕಠಿಣ ಅಭ್ಯಾಸ ನಡೆಸಿದ್ದಾರೆ.   ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನುಮಣಿಸಿದ ಕ್ರೊವೇಷಿಯಾ ಫಿಫಾ ವಿಶ್ವಕಪ್ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಚೊಚ್ಚಲ ಪ್ರಶಸ್ತಿಯ ಕನಸು ಕಾಣುತ್ತಿದೆ. 

‘ನನ್ನ ಹಣೆ ಖಾಲಿ ಇದೆ. ವಿಶ್ವಕಪ್ ಫೈನಲ್ ಗೆದ್ದರೆ ಟ್ಯಾಟು ಹಾಕಿಸಿಕೊಳ್ಳುತ್ತೇನೆ. ದೇವರ ದಯೆಯಿಂದ ನಾವು ವಿಶ್ವಕಪ್ ಗೆಲ್ಲಬೇಕಷ್ಟೆ. ಆದರೆ ಟ್ಯಾಟೂ ಹಾಕಿಸಿಕೊಳ್ಳುವ ಮೊದಲು ನನ್ನ ಹೆಂಡತಿಯ ಅನುಮತಿ ಕೇಳಬೇಕಿದೆ’ ಎಂದು ರಕಿಟಿಚ್ ತಮಾಷೆ ಮಾಡಿದ್ದಾರೆ.

loader