Asianet Suvarna News Asianet Suvarna News

ಇಂದಿಗೆ 50 ವರ್ಷದ ಹಿಂದೆ ನಿರ್ಮಾಣವಾಗಿತ್ತು ಅಪರೂಪದಲ್ಲೇ ಅಪರೂಪದ ದಾಖಲೆ..!

1968ರಲ್ಲಿ ವೆಸ್ಟ್’ಇಂಡಿಸ್ ದಿಗ್ಗಜ ಸರ್ ಗ್ಯಾರಿ ಸೋಬರ್ಸ್ ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ಸ್ಫೋಟಕ ಬ್ಯಾಟಿಂಗ್’ಗೆ ಮುನ್ನುಡಿ ಬರೆದಿದ್ದರು.

Its 50 Years Since Sobers Hit Six Sixes
Author
Bengaluru, First Published Aug 31, 2018, 4:50 PM IST

ಬೆಂಗಳೂರು[ಆ.31]: ಕ್ರಿಕೆಟ್’ನಲ್ಲಿ ದಾಖಲೆಗಳು ನಿರ್ಮಾಣವಾಗುವುದು ಸಹಜ. ಬ್ಯಾಟ್ಸ್’ಮನ್ ಹಾಗೂ ಬೌಲರ್’ಗಳು ತಮ್ಮ ಕ್ಷೇತ್ರಗಳಲ್ಲಿ ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ. ಇಂದಿಗೆ 50 ವರ್ಷಗಳ ಹಿಂದೆ ಕ್ರಿಕೆಟ್ ದಿಗ್ಗಜ ಸರ್ ಗ್ಯಾರಿ ಸೋಬರ್ಸ್ ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ಆ ಕಾಲದಲ್ಲಿ ಅಪರೂಪದಲ್ಲೇ ಅಪರೂಪದ ಸಾಧನೆ ಮಾಡಿದ್ದರು.

1968ರಲ್ಲಿ ವೆಸ್ಟ್’ಇಂಡಿಸ್ ದಿಗ್ಗಜ ಗ್ಯಾರಿ ಸೋಬರ್ಸ್ ಸತತ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ಸ್ಫೋಟಕ ಬ್ಯಾಟಿಂಗ್’ಗೆ ಮುನ್ನುಡಿ ಬರೆದಿದ್ದರು. ಈ ಮೂಲಕ ಆರು ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಸೋಬರ್ಸ್ ಪಾತ್ರರಾಗಿದ್ದರು. ಗ್ಲಾಮೋರ್ಗನ್ ತಂಡದ ವಿರುದ್ಧ ನಾಟಿಂಗ್’ಹ್ಯಾಮ್’ಶೈರ್ ಪರ ಕಣಕ್ಕಿಳಿದಿದ್ದ ಸೋಬರ್ಸ್ 6 ಸಿಕ್ಸರ್ ಸಿಡಿಸಿದ್ದರು. ಮಾಲ್ಕಮ್ ನ್ಯಾಶ್ ಬೌಲಿಂಗ್’ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದರು.

ಹೀಗಿತ್ತು ಆ ಅಪರೂಪದ ಕ್ಷಣ..

Follow Us:
Download App:
  • android
  • ios