2018ರ ವಿಶ್ವಕಪ್‌'ಗೆ ಇಟಲಿ, ಯುಎಸ್‌ಎ, ನೆದರ್‌'ಲೆಂಡ್ಸ್ ಹಾಗೂ ಚಿಲಿ ತಂಡಗಳು ಅರ್ಹತೆ ಪಡೆಯದೆ ಇರುವುದು ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

ಮಿಲನ್(ನ.15): 2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ವಿಶ್ವಕಪ್‌'ಗೆ ಅರ್ಹತೆ ಪಡೆಯುವಲ್ಲಿ ಮಾಜಿ ಚಾಂಪಿಯನ್ ಇಟಲಿ ವಿಫಲವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 60 ವರ್ಷಗಳಲ್ಲಿ ಇಟಲಿ ವಿಶ್ವಕಪ್‌'ಗೆ ಪ್ರವೇಶ ಪಡೆಯದೆ ಇರುವುದು ಇದೇ ಮೊದಲು. 1958ರಿಂದ 2014ರ ವರೆಗೂ ನಡೆದ ಪ್ರತಿ ವಿಶ್ವಕಪ್‌'ನಲ್ಲೂ ಇಟಲಿ ಪಾಲ್ಗೊಂಡಿತ್ತು. 1934,1938,1990 ಹಾಗೂ 2006ರಲ್ಲಿ ತಂಡ ಚಾಂಪಿಯನ್ ಆಗಿತ್ತು. ಸ್ಯಾನ್ ಸಿರೋ ಫುಟ್ಬಾಲ್ ಪಂದ್ಯಾವಳಿಯ 2ನೇ ಹಂತದ ಪ್ಲೇ ಆಫ್ ಪಂದ್ಯದಲ್ಲಿ ಇಟಲಿ ತಂಡ ಸ್ವೀಡನ್ ಎದುರು ಕನಿಷ್ಠ 1-0 ಗೋಲುಗಳಿಂದ ಗೆಲ್ಲಲೇಬೇಕಿತ್ತು. ಆದರೆ ಪಂದ್ಯ 0-0 ಗೋಲುಗಳಲ್ಲಿ ಡ್ರಾ ಆಯಿತು.

2018ರ ವಿಶ್ವಕಪ್‌'ಗೆ ಇಟಲಿ, ಯುಎಸ್‌ಎ, ನೆದರ್‌'ಲೆಂಡ್ಸ್ ಹಾಗೂ ಚಿಲಿ ತಂಡಗಳು ಅರ್ಹತೆ ಪಡೆಯದೆ ಇರುವುದು ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ.