ರಿಯೋ (ಸೆ.02): ಭಾರತದ ಮಹಿಳಾ ಶೂಟರ್ ಯಶಸ್ವಿನಿ ಸಿಂಗ್ ದೇಸ್ವಾಲ್, ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟರು.

ಐಎಸ್‌ಎಸ್‌ಎಫ್‌ ಶೂಟಿಂಗ್‌: ಭಾರತಕ್ಕೆ ಮತ್ತೆರಡು ಚಿನ್ನ

22 ವರ್ಷ ವಯಸ್ಸಿನ ಮಾಜಿ ಜೂ. ವಿಶ್ವ ಚಾಂಪಿಯನ್ ಯಶಸ್ವಿನಿ, 236.7 ಅಂಕಗಳಿಸಿ ಚಿನ್ನ ಗೆದ್ದರು. ಇದರೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು. 

ಶೂಟಿಂಗ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 9ನೇ ಶೂಟರ್ ಯಶಸ್ವಿನಿ ಆಗಿದ್ದಾರೆ. ಫೈನಲ್ ಸ್ಪರ್ಧೆಯಲ್ಲಿ ಮಾಜಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಉಕ್ರೇನ್‌ನ ಒಲೆನಾ ಕೊಸ್ತೆವಿಚ್ (234.8) ಅಂಕಗಳಿಸಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು.