Asianet Suvarna News Asianet Suvarna News

ಐಎಸ್‌ಎಸ್‌ಎಫ್‌ ಶೂಟಿಂಗ್‌: ಭಾರತಕ್ಕೆ ಮತ್ತೆರಡು ಚಿನ್ನ

ಭಾರತೀಯ ಶೂಟರ್‌ಗಳು  ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಚಾಕಚಕ್ಯತೆಯನ್ನು ಮೆರೆದಿದ್ದಾರೆ. ಚೀನಾ ಪಡೆಯನ್ನು ಹಿಂದಿಕ್ಕಿ ಕೂಟದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ಈ ಕೂಟದ ಮೂಲಕ 2020ರ ಟೋಕಿಯೋ ಒಲಿಂಪಿಕ್ಸ್ ಕೂಟಕ್ಕೆ ಭಾರತದ 7 ಶೂಟರ್‌ಗಳು ಅರ್ಹತೆ ಗಿಟ್ಟಿಸಿಕೊಂಡ ಸಾಧನೆ ಮಾಡಿದ್ದಾರೆ.

ISSF Shooting 2019 India sweep both mixed team titles to bag five gold medals
Author
Munich, First Published May 31, 2019, 12:32 PM IST
  • Facebook
  • Twitter
  • Whatsapp

ಮ್ಯೂನಿಕ್‌[ಮೇ.31]: ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿದೆ. ಟೂರ್ನಿಯ ಅಂತಿಮ ದಿನವಾದ ಗುರುವಾರ ಭಾರತ ಮತ್ತೆರಡು ಚಿನ್ನದ ಪದಕ ಜಯಿಸಿ, ಒಟ್ಟು 5 ಚಿನ್ನ, 1 ಬೆಳ್ಳಿಯೊಂದಿಗೆ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿತು. 2 ಚಿನ್ನದೊಂದಿಗೆ 9 ಪದಕ ಗೆದ್ದ ಚೀನಾ 2ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಶೂಟಿಂಗ್‌ ವಿಶ್ವಕಪ್‌: ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಮನು

ಗುರುವಾರ ನಡೆದ 10 ಮೀ. ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಭಾರತದ ಅಂಜುಮ್‌ ಮೌದ್ಗಿಲ್‌ ಹಾಗೂ ದಿವ್ಯಾನ್ಸ್ ಪನ್ವಾರ್‌ ಜೋಡಿ ಚಿನ್ನದ ಪದಕ ಜಯಿಸಿತು. ಫೈನಲ್‌ನಲ್ಲಿ ಭಾರತೀಯರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಪೂರ್ವಿ ಚಾಂಡೆಲಾ ಹಾಗೂ ದೀಪಕ್‌ ಕುಮಾರ್‌ ಜೋಡಿ ಬೆಳ್ಳಿ ಪದಕ ಗಳಿಸಿತು.

ಭರ್ಜರಿ ಬೇಟೆ - ವಿಶ್ವದಾಖಲೆಯೊಂದಿಗೆ ಸೌರಭ್‌ಗೆ ಚಿನ್ನ

ದಿನದ ಅಂತಿಮ ಸ್ಪರ್ಧೆಯಾಗಿದ್ದ 10 ಮೀ.ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಮನು ಭಾಕರ್‌ ಹಾಗೂ ಸೌರಭ್‌ ಚೌಧರಿ ಜೋಡಿ ಚಿನ್ನದ ಪದಕಕ್ಕೆ ಮುತ್ತಿಟ್ಟಿತು. ಸತತ 3ನೇ ವಿಶ್ವಕಪ್‌ನಲ್ಲಿ ಈ ಜೋಡಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡು ದಾಖಲೆ ಬರೆಯಿತು.

ಚಿನ್ನ ಗೆದ್ದ ಭಾರತದ ಶೂಟರ್ ಅಪೂರ್ವಿ
 

Follow Us:
Download App:
  • android
  • ios