ISSF World Championships 2023 ಮೆಹುಲಿ ಘೋಷ್‌ಗೆ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ..!
ಶನಿವಾರ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ಮೆಹುಲಿ 229.8 ಅಂಕಗಳನ್ನು ಪಡೆದು 3ನೇ ಸ್ಥಾನಿಯಾದರು. ಕರ್ನಾಟಕದ ತಿಲೋತ್ತಮ ಸೆನ್ 208.4 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಬಾಕು(ಆ.20): ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಶೂಟರ್ ಮೆಹಲಿ ಘೋಷ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ ಭಾರತದಿಂದ ಪ್ಯಾರಿಸ್ ಒಲಿಂಪಿಕ್ಸ್‌ಗೆ ತೇರ್ಗಡೆಯಾದ 4ನೇ ಶೂಟರ್ ಎನಿಸಿಕೊಂಡರು. ಈ ಮೊದಲು ಭೌನೀಷ್, ರುದ್ರಾಂಕ್ಷ್ ಪಾಟೀಲ್ ಹಾಗೂ ಸ್ವಪ್ನಿಲ್ ಕುಸಾಲೆ ಈ ಸಾಧನೆ ಮಾಡಿದ್ದರು.
ಶನಿವಾರ ನಡೆದ ಮಹಿಳೆಯರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ಮೆಹುಲಿ 229.8 ಅಂಕಗಳನ್ನು ಪಡೆದು 3ನೇ ಸ್ಥಾನಿಯಾದರು. ಕರ್ನಾಟಕದ ತಿಲೋತ್ತಮ ಸೆನ್ 208.4 ಅಂಕಗಳೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಮೆಹುಲಿ, ತಿಲೋತ್ತಮ ಹಾಗೂ ರಮಿತಾ ಚಿನ್ನ ಜಯಿಸಿದರು. ಚಿನ್ನದ ಪದಕ್ಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಚೀನಾವನ್ನು ಹಿಂದಿಕ್ಕಿದರು. ಸದ್ಯ ಭಾರತ 2 ಚಿನ್ನ, 2 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ3ನೇ ಸ್ಥಾನದಲ್ಲಿದೆ.
ವಿಶ್ವ ಅಥ್ಲೆಟಿಕ್ಸ್: ಮೊದಲ ದಿನ ಭಾರತಕ್ಕೆ ನಿರಾಸೆ!
ಬುಡಾಪೆಸ್ಟ್(ಹಂಗೇರಿ): ಬಹುನಿರೀಕ್ಷಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ದಿನವಾದ ಶನಿವಾರ ಭಾರತದ ಅಥ್ಲೀಟ್‌ಗಳು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದು, ಯಾರೊಬ್ಬರೂ ಫೈನಲ್‌ಗೇರಲಿಲ್ಲ.
ಪುರುಷರ 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ಪದಕ ಭರವಸೆ ಮೂಡಿಸಿದ್ದ ಅವಿನಾಶ್ ಸಾಬ್ಳೆ ಫೈನಲ್ ಪ್ರವೇಶಿಸಲು ವಿಫಲರಾದರು. ತಾವು ಸ್ಪರ್ಧಿಸಿದ್ದ ಹೀಟ್ಸ್‌ನಲ್ಲಿ 8 ನಿಮಿಷ 22.24 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟ ಸಾಬ್ಳೆ ಒಟ್ಟಾರೆ 14ನೇ ಸ್ಥಾನ ಪಡೆದರು. ಅಗ್ರ 10 ಅಥ್ಲೀಟ್‌ಗಳಷ್ಟೇ ಫೈನಲ್‌ಗೇರಿದರು.
Chess World Cup 2023: ಮೊದಲ ಸುತ್ತಲ್ಲೇ ಡ್ರಾ ಸಾಧಿಸಿದ ಪ್ರಜ್ಞಾನಂದ
ಇನ್ನು, ಪುರುಷರ 20 ಕಿ.ಮೀ. ವೇಗದ ನಡಿಗೆ ಸ್ಪರ್ಧೆಯಲ್ಲಿ ವಿಕಾಸ್ ಸಿಂಗ್ 1 ಗಂಟೆ 21:58 ನಿಮಿಷಗಳಲ್ಲಿ ಕ್ರಮಿಸಿ 27ನೇ ಸ್ಥಾನ ಪಡೆದರೆ, ಪರಮ್‌ಜೀತ್(1:24:02 ಗಂಟೆ) 35ನೇ ಸ್ಥಾನ, ಆಕಾಶ್‌ದೀಪ್ ಸಿಂಗ್(1:31:12) 47ನೇ ಸ್ಥಾನ ಪಡೆದರು.
ಶೈಲಿಯೂ ಔಟ್: ಮಹಿಳೆಯರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಶೈಲಿ ಸಿಂಗ್ ಫೈನಲ್ ಪ್ರವೇಶಿಸಲು ವಿಫಲರಾದರು. ಅವರು ಅರ್ಹತಾ ಸುತ್ತಿನಲ್ಲಿ ತಮ್ಮ 3 ಪ್ರಯತ್ನಗಳಲ್ಲಿ ಕ್ರಮವಾಗಿ 6.26 ಮೀ., 6.40 ಮೀ. ಹಾಗೂ 6.36 ಮೀ. ದೂರಕ್ಕೆ ಜಿಗಿದು, ಒಟ್ಟು 36 ಸ್ಪರ್ಧಿಗಳ ಪೈಕಿ 24ನೇ ಸ್ಥಾನ ಪಡೆದರು. ಅಗ್ರ 12 ಅಥ್ಲೀಟ್‌ಗಳು ಫೈನಲ್ ಪ್ರವೇಶಿಸಿದರು.
ಫಿಟ್ ಇಲ್ಲದವ್ರಿಗೂ ಭಾರತ ತಂಡದಲ್ಲಿ ಸ್ಥಾನ: ರಾಣಿ ರಾಂಪಾಲ್
ನವದೆಹಲಿ: ಭಾರತ ತಂಡಕ್ಕೆ ಆಯ್ಕೆಯಾಗದಿರುವುದಕ್ಕೆ ಇತ್ತೀಚೆಗಷ್ಟೇ ಕೋಚ್, ಆಯ್ಕೆಗಾಗರ ವಿರುದ್ದ ಕಿಡಿಕಾರಿದ್ದ ಭಾರತ ಮಹಿಳಾ ಹಾಕಿ ತಂಡ ಮಾಜಿ ನಾಯಕಿ ರಾಣಿ ರಾಂಪಾಲ್ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿದ್ದಾರೆ.
Asia Cup 2023: ಉದ್ಘಾಟನಾ ಪಂದ್ಯ ವೀಕ್ಷಿಸಲು ಪಾಕಿಸ್ತಾನಕ್ಕೆ ಬರುವಂತೆ ಜಯ್ ಶಾಗೆ ಪಿಸಿಬಿ ಆಹ್ವಾನ..!
ಏಷ್ಯನ್ ಗೇಮ್ಸ್ ಸಂಭಾವ್ಯರ ಪಟ್ಟಿಯಲ್ಲಿರುವ ಹಲವು ಆಟಗಾರ್ತಿಯರಿಗೆ ಫಿಟ್ನೆಸ್ ಸಮಸ್ಯೆ ಇದೆ ಎಂದು ಆರೋಪಿಸಿರುವ ರಾಣಿ, ಆಟಗಾರ್ತಿಯರ ಹೆಸರು ಪ್ರಸ್ತಾಪಿಸುವುದಿಲ್ಲ ಎಂದಿದ್ದಾರೆ.