Asianet Suvarna News Asianet Suvarna News

Chess World Cup 2023: ಮೊದಲ ಸುತ್ತಲ್ಲೇ ಡ್ರಾ ಸಾಧಿಸಿದ ಪ್ರಜ್ಞಾನಂದ

ಭಾನುವಾರ 2ನೇ ಸುತ್ತು ನಡೆಯಲಿದ್ದು, ಪ್ರಜ್ಞಾನಂದ ಬಿಳಿ ಕಾಯಿಗಳೊಂದಿಗೆ ಆಡಲಿದ್ದಾರೆ. ಈ ಸುತ್ತಿನಲ್ಲಿ ಗೆಲ್ಲುವ ಆಟಗಾರ ಫೈನಲ್‌ ಪ್ರವೇಶಿಸಲಿದ್ದಾರೆ. ಒಂದು ವೇಳೆ ಈ ಸುತ್ತು ಸಹ ಡ್ರಾಗೊಂಡರೆ, ಆಗ ಸೋಮವಾರ ಟೈ ಬ್ರೇಕರ್‌ ಸುತ್ತು ನಡೆಯಲಿದೆ.

Chess World Cup 2023 R Praggnanandhaa digs his heels in to settle for a 78 move draw against Caruana in semifinals kvn
Author
First Published Aug 20, 2023, 9:49 AM IST

ಬಾಕು(ಅಜರ್‌ಬೈಜಾನ್): ಫಿಡೆ ಚೆಸ್‌ ವಿಶ್ವಕಪ್‌ನಲ್ಲಿ 21 ವರ್ಷಗಳ ಬಳಿಕ ಫೈನಲ್‌ಗೇರಿ ಇತಿಹಾಸ ಸೃಷ್ಟಿಸುವ ನಿರೀಕ್ಷೆಯಲ್ಲಿರುವ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ, ಸೆಮಿಫೈನಲ್‌ನ ಮೊದಲ ಸುತ್ತಿನಲ್ಲಿ ಶನಿವಾರ ಡ್ರಾ ಸಾಧಿಸಿದ್ದಾರೆ.

ವಿಶ್ವ ನಂ.2 ಅಮೆರಿಕದ ಫ್ಯಾಬಿಯಾನೋ ಕರುವಾನಾ ವಿರುದ್ಧದ ರೋಚಕ ಸೆಮೀಸ್‌ನ ಮೊದಲ ಸುತ್ತಿನಲ್ಲಿ ಕಪ್ಪು ಕಾಯಿಗಳೊಂದಿಗೆ ಆಡಿದ ಪ್ರಜ್ಞಾನಂದ, ಆರಂಭದಲ್ಲಿ ಹಿನ್ನಡೆ ಅನುಭವಿಸಿದರು. ಸುತ್ತಿನ ಬಹುತೇಕ ಸಮಯ ಭಾರತೀಯನ ಮೇಲೆ ಒತ್ತಡ ಹೇರಿದ ಫ್ಯಾಬಿಯಾನೋ ಗೆಲುವಿನ ನಿರೀಕ್ಷೆಯಲ್ಲಿದ್ದರು. ಒಂದು ಹಂತದಲ್ಲಿ ಪ್ರಜ್ಞಾನಂದ ಸಮಯದ ಅಭಾವ ಕೂಡ ಎದುರಿಸುತ್ತಿದ್ದರು. 3 ನಿಮಿಷಗಳಲ್ಲಿ 10 ನಡೆಗಳನ್ನು ಸಾಧಿಸಬೇಕಿತ್ತು. ಇಷ್ಟಾದರೂ ಫ್ಯಾಬಿಯಾನೋಗೆ ಗೆಲ್ಲಲು 18ರ ಭಾರತೀಯ ಬಿಡಲಿಲ್ಲ.

Asia Cup 2023: ಉದ್ಘಾಟನಾ ಪಂದ್ಯ ವೀಕ್ಷಿಸಲು ಪಾಕಿಸ್ತಾನಕ್ಕೆ ಬರುವಂತೆ ಜಯ್ ಶಾಗೆ ಪಿಸಿಬಿ ಆಹ್ವಾನ..!

ಭಾನುವಾರ 2ನೇ ಸುತ್ತು ನಡೆಯಲಿದ್ದು, ಪ್ರಜ್ಞಾನಂದ ಬಿಳಿ ಕಾಯಿಗಳೊಂದಿಗೆ ಆಡಲಿದ್ದಾರೆ. ಈ ಸುತ್ತಿನಲ್ಲಿ ಗೆಲ್ಲುವ ಆಟಗಾರ ಫೈನಲ್‌ ಪ್ರವೇಶಿಸಲಿದ್ದಾರೆ. ಒಂದು ವೇಳೆ ಈ ಸುತ್ತು ಸಹ ಡ್ರಾಗೊಂಡರೆ, ಆಗ ಸೋಮವಾರ ಟೈ ಬ್ರೇಕರ್‌ ಸುತ್ತು ನಡೆಯಲಿದೆ.

ಕಾರ್ಲ್‌ಸನ್‌ಗೆ ಜಯ

ಮತ್ತೊಂದು ಸೆಮೀಸ್‌ನಲ್ಲಿ ವಿಶ್ವ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್‌, ಅಜರ್‌ಬೈಜಾನ್‌ನ ನಿಜಾತ್‌ ಅಬಸೊವ್‌ ವಿರುದ್ಧ ಮೊದಲ ಸುತ್ತಿನಲ್ಲಿ ಸುಲಭ ಗೆಲುವು ಸಾಧಿಸಿದರು. ಭಾನುವಾರ 2ನೇ ಸುತ್ತಿನಲ್ಲಿ ಕಾರ್ಲ್‌ಸನ್‌ ಡ್ರಾ ಸಾಧಿಸಿದರೂ ಸಾಕು, ಫೈನಲ್‌ ಪ್ರವೇಶಿಸಲಿದ್ದಾರೆ. ಒಂದು ವೇಳೆ ನಿಜಾತ್‌ ಗೆದ್ದರೆ ಆಗ ಪಂದ್ಯ ಟೈ ಬ್ರೇಕರ್‌ಗೆ ಸಾಗಲಿದೆ.

Chess World Cup 2023: ಸೆಮೀಸ್‌ನಲ್ಲಿಂದು ಭಾರತದ ಪ್ರಜ್ಞಾನಂದ ಕಣಕ್ಕೆ

ಪ್ರಿಯಾ ಮಲಿಕ್‌ ಅ-20 ಕುಸ್ತಿ ವಿಶ್ವ ಚಾಂಪಿಯನ್‌

ಅಮ್ಮಾನ್‌(ಜೊರ್ಡನ್‌): ಭಾರತದ ಯುವ ಕುಸ್ತಿಪಟು ಪ್ರಿಯಾ ಮಲಿಕ್‌ ಇಲ್ಲಿ ನಡೆಯುತ್ತಿರುವ ಕಿರಿಯರ ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಗುರುವಾರ ರಾತ್ರಿ ಅಂಡರ್‌-20 ವಿಭಾಗದ ಮಹಿಳೆಯರ 76 ಕೆ.ಜಿ. ಸ್ಪರ್ಧೆಯ ಫೈನಲ್‌ನಲ್ಲಿ ಪ್ರಿಯಾ, ಜರ್ಮನಿಯ ಲಾರಾ ಕೆಲಿನ್‌ ವಿರುದ್ಧ ಗೆಲುವು ಸಾಧಿಸಿದರು. ಈ ಮೂಲಕ ಅಂಡರ್‌-20 ವಿಶ್ವ ಚಾಂಪಿಯನ್‌ ಎನಿಸಿಕೊಂಡ 2ನೇ ಭಾರತೀಯ ಮಹಿಳಾ ಕುಸ್ತಿಪಟು ಎನಿಸಿಕೊಂಡರು. ಕಳೆದ ವರ್ಷ 53 ಕೆ.ಜಿ. ವಿಭಾಗದಲ್ಲಿ ಅಂತಿಮ್‌ ಪಂಘಲ್‌ ಗೆದ್ದಿದ್ದರು.

ಇಂದಿನಿಂದ ವಿಶ್ವ ಅಥ್ಲೆಟಿಕ್ಸ್ ಕೂಟ; ನೀರಜ್‌ ಚೋಪ್ರಾ ಮೇಲೆ ನಿರೀಕ್ಷೆ

ಈಜು: ರಾಜ್ಯದಿಂದ ಮತ್ತೆ ನಾಲ್ಕು ರಾಷ್ಟ್ರೀಯ ದಾಖಲೆ

ಭುವನೇಶ್ವರ: 39ನೇ ಸಬ್‌ ಜೂನಿಯರ್‌, 49ನೇ ಜೂನಿಯರ್‌ ರಾಷ್ಟ್ರೀಯ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ 4 ಈಜುಪಟುಗಳು ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಶನಿವಾರ ರಾಜ್ಯಕ್ಕೆ ಮತ್ತೆ 4 ಚಿನ್ನ ಸೇರಿ 13 ಪದಕ ಒಲಿಯಿತು. ಬಾಲಕರ 50 ಮೀ. ಫ್ರೀಸ್ಟೈಲ್‌ನಲ್ಲಿ ಇಶಾನ್‌, 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ವಿಧಿತ್‌ ಚಿನ್ನ ಗೆದ್ದರೆ, ಬಾಲಕಿಯರ 200 ಮೀ. ಬಟರ್‌ಫ್ಲೈನಲ್ಲಿ ತನಿಶಿ ಹಾಗೂ ಧಿನಿಧಿ ಇಬ್ಬರೂ ರಾಷ್ಟ್ರೀಯ ದಾಖಲೆಯೊಂದಿಗೆ ಕ್ರಮವಾಗಿ ಚಿನ್ನ, ಬೆಳ್ಳಿ ಗೆದ್ದರು. ಬಾಲಕರ 200 ಮೀ. ಬಟರ್‌ಫ್ಲೈನಲ್ಲಿ ಅಕ್ಷಾಜ್‌ ಚಿನ್ನ ಜಯಿಸಿದರು.

Follow Us:
Download App:
  • android
  • ios