ISSF ಶೂಟಿಂಗ್ ವಿಶ್ವಕಪ್: ಭಾರತಕ್ಕೆ ಬರಲ್ಲ ಪಾಕಿಸ್ತಾನ ಶೂಟರ್ಸ್!
ಪುಲ್ವಾಮಾ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ವ್ಯವಹಾರ ಸುಗಮವಾಗಿ ಸಾಗುತ್ತಿಲ್ಲ. ದಾಳಿಯಿಂದ ಇದೀಗ ಭಾರತದಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಶೂಟರ್‌ಗಳು ಪಾಲ್ಗೊಳ್ಳುತ್ತಿಲ್ಲ.
ನವದೆಹಲಿ(ಫೆ.21): ಭಾರತದ ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿರುವ ISSF ಶೂಟಿಂಗ್ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನದ ಶೂಟರ್‌ಗಳು ಆಗಮಿಸುತ್ತಿಲ್ಲ. ಪುಲ್ವಾಮಾ ದಾಳಿಯಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಹದೆಗೆಟ್ಟಿದೆ. ಹೀಗಾಗಿ ಪಾಕಿಸ್ತಾನ ಶೂಟರ್‌ಗಳಿಗೆ ವೀಸಾ ನೀಡಲು ಭಾರತ ವಿಳಂಬ ಮಾಡಿತ್ತು. ಇದೀಗ ಪಾಕಿಸ್ತಾನ ಶೂಟಿಂಗ್ ಫೆಡರೇಶನ್ ಭಾರತ ವೀಸಾ ನೀಡಲೇ ಇಲ್ಲ ಎಂದು ವಿಶ್ವ ಶೂಟಿಂಗ್ ಫೆಡರೇಶನ್‌ಗೆ ದೂರು ನೀಡಿದೆ.
ಇದನ್ನೂ ಓದಿ: ಶೂಟಿಂಗ್ ವಿಶ್ವಕಪ್: ಪಾಕ್ ಶೂಟರ್‌ಗಳಿಗೆ ಭಾರತ ವೀಸಾ
ಪಾಕಿಸ್ತಾನ ಶೂಟರ್‌ಗಳಿಗೆ ಭಾರತ ವೀಸಾ ನೀಡಲೇ ಇಲ್ಲ. ಹೀಗಾಗಿ ಭಾರತದಲ್ಲಿ ನಡೆಯುವ ಶೂಟಿಂಗ್ ವಿಶ್ವಕಪ್‍ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪಾಕಿಸ್ತಾನ ಶೂಟಿಂಗ್ ಫೆಡರೇಶನ್ ಆರೋಪಿಸಿದೆ. ಭಾರತ ಸುಳ್ಳು ಹೇಳುತ್ತಿದೆ ಎಂದು ಪಾಕಿಸ್ತಾನ ಶೂಟಿಂಗ್ ಸಂಸ್ಥೆ(NRAP) ಉಪಾಧ್ಯಕ್ಷ ಜಾವೇದ್ ಎಸ್ ಲೋಧಿ ಹೇಳಿದ್ದಾರೆ.
ಇದನ್ನೂ ಓದಿ: ಪುಲ್ವಾಮಾ ದಾಳಿ: ಭಾರತ-ಪಾಕ್ ವಿಶ್ವಕಪ್ ಪಂದ್ಯ - ನಿರ್ಧಾರ ಪ್ರಕಟಿಸಿದ ICC
ಇದಕ್ಕೂ ಮೊದಲು ಭಾರತ ವೀಸಾ ವಿಳಂಬ ಮಾಡಿದೆ. ಹೀಗಾಗಿ ISSF ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದಿತ್ತು. ಇದೀಗ ವೀಸಾ ಸಿಕ್ಕೆ ಇಲ್ಲ ಎಂದು ಹೇಳಿದೆ. ಆದರೆ 2 ಪಾಕಿಸ್ತಾನ ಶೂಟರ್ ಹಾಗೂ ಒರ್ವ ಟೀಂ ಮ್ಯಾನೇಜರ್‌ಗೆ ವೀಸಾ ನೀಡಲಾಗಿದೆ ಎಂದು ಭಾರತ ಸ್ಪಷ್ಟಪಡಿಸಿದೆ. ಫೆ.23 ರಿಂದ ನವದೆಹಲಿಯಲ್ಲಿ ISSF ಶೂಟಿಂಗ್ ವಿಶ್ವಕಪ್ ಆರಂಭಗೊಳ್ಳಲಿದೆ.