Asianet Suvarna News Asianet Suvarna News

ಕಿರಿ​ಯರ ಶೂಟಿಂಗ್‌: ಮುಂದು​ವ​ರಿದ ಭಾರ​ತದ ಪದಕ ಬೇಟೆ

ISSF Junior World Cup Indian shooters continue medal winning run
  • Facebook
  • Twitter
  • Whatsapp

ಗಬಾ​ಲಾ(ಸೆ.20): ಐಎ​ಸ್‌​ಎ​ಸ್‌​ಎಫ್‌ ಕಿರಿ​ಯರ ಶೂಟಿಂಗ್‌ ವಿಶ್ವ​ಕಪ್‌ ಸ್ಪರ್ಧಾವಳಿಯಲ್ಲಿ ಭಾರ​ತೀ​ಯರ ಪದಕ ಬೇಟೆ ಮುಂದು​ವ​ರಿ​ದಿದೆ. ಕ್ರೀಡಾ​ಕೂ​ಟದ ಎರ​ಡನೇ ದಿನ​ವಾದ ಮಂಗ​ಳ​ವಾರ, ಭಾರ​ತಕ್ಕೆ ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ಮೂರು ಕಂಚಿನ ಪದಕ ಬಂದಿದ್ದು, ಇದರೊಂದಿಗೆ ಭಾರತದ ಒಟ್ಟಾರೆ ಪದಕ ಸಂಖ್ಯೆ 13ಕ್ಕೇರಿದೆ.

ಎರಡನೇ ದಿನದ ಗುರಿ ಇಡುವ ಸ್ಪರ್ಧೆಯಲ್ಲಿ ಪುರು​ಷರ 10 ಮೀ. ಏರ್‌ ಪಿಸ್ತೂಲ್‌ ರೈಫಲ್‌ ತಂಡ​ಗಳ ವಿಭಾ​ಗ​ದಲ್ಲಿ ಸ್ಪರ್ಧಿ​ಸಿದ್ದ ಗೌರ​ವ್‌ ರಾಣಾ, ಹೇಮೇಂದ್ರ ಕುಷ್ವಾ ಹಾಗೂ ಸೌರಭ್‌ ಚೌಧರಿ ಅವ​ರುಳ್ಳ ತಂಡ, ರಜತ ಗೌರವ ಪಡೆ​ದಿತ್ತು. ಭಾರ​ತದ ಮತ್ತೊಬ್ಬ ಶೂಟರ್‌ ಅನ್ಮೋಲ್‌ ದಿನದ ಸ್ಪರ್ಧೆ​ಗ​ಳಲ್ಲಿ ಮೊದಲ ವೈಯ​ಕ್ತಿಕ ಬೆಳ್ಳಿ ತಂದರು. ಒಟ್ಟಾ​ರೆ​ಯಾಗಿ 197.5 ಅಂಕ​ ಗಳಿ​ಸಿದ ಅನ್ಮೋಲ್‌ ಬೆಳ್ಳಿ ಗೆದ್ದರು. ಈ ವಿಭಾಗದಲ್ಲಿ ರಷ್ಯಾದ ಆರ್ಟೆಮ್‌ ಚೊರ್ನೊ​ಸೌವ್‌ (199.7) ಚಿನ್ನ ಗೆದ್ದರೆ, ರಷ್ಯಾ​ದ​ವರೇ ಆದ ಮತ್ತೊಬ್ಬ ಆಟ​ಗಾರ ಇವ್‌​ಜಿ​ನಿಯು ಬೊರೊ​ವೊಯ್‌ (175.8) ಕಂಚು ಜಯಿಸಿದರು.

ಇನ್ನು ಮಹಿ​ಳೆ​ಯರ 50 ಮೀ. ರೈಫಲ್‌ 3 ಪೊಸಿ​ಷನ್ಸ್‌ ವಿಭಾ​ಗ​ದಲ್ಲಿ ಭಾರ​ತದ ಗಾಯತ್ರಿ ನಿತ್ಯ​ನಂದಮ್‌ (438.9 ಅಂಕ) ಕಂಚಿನ ಪದಕ ಗೆದ್ದರೆ, ಇದೇ ವಿಭಾ​ಗ​ದಲ್ಲಿ ಭಾರ​ತದ ಇತ​ರ ಶೂಟ​ರ್‌​ಗ​ಳಾದ ಸೋನಿಕಾ ಹಾಗೂ ಆದಿತಿ ಸಿಂಗ್‌ ಸಹ ಫೈನಲ್‌ಗೆ ಕಾಲಿ​ಟ್ಟಿ​ದ್ದರೂ ಅವ​ರಾರ‍ಯರೂ ಪದಕ ಗೆಲ್ಲ​ಲಿಲ್ಲ. ಈ ವಿಭಾ​ಗ​ದಲ್ಲಿ ಜೆಕ್‌ ಗಣ​ರಾ​ಜ್ಯದ ನಿಕೋಲಾ ಫಾಯಿ​ಸ್ಟೋವಾ (451.5) ಚಿನ್ನ ಗೆದ್ದರೆ, ರಷ್ಯಾದ ಓಲ್ಗಾ ಎಫಿ​ಮೊವಾ (450.6) ಬೆಳ್ಳಿ ಗೆದ್ದರು.

ಇದಾದ ನಂತರ, ಮಹಿ​ಳೆ​ಯರ 10 ಮೀ. ಏರ್‌ ರೈಫಲ್‌ ತಂಡ​ಗಳ ವಿಭಾ​ಗದಲ್ಲಿ ಸ್ಪರ್ಧಿ​ಸಿದ್ದ ಯಶ​ಸ್ವಿನಿ ಸಿಂಗ್‌ ದೇಸ್ವಾಲ್‌, ಮಲೈಕಾ ಗೋಯೆಲ್‌ ಹಾಗೂ ಹರ್ಷದಾ ನಿಥಾವೆ ಅವ​ರುಳ್ಳ ತಂಡ ಒಟ್ಟಾ​ರೆ​ಯಾಗಿ 1122 ಅಂಕ​ಗ​ಳ​ನ್ನು ಕಲೆ​ಹಾ​ಕುವ ಮೂಲಕ ಚಿನ್ನದ ಗೌರ​ವಕ್ಕೆ ಪಾತ್ರ​ವಾ​ಯಿತು.

Follow Us:
Download App:
  • android
  • ios