ಐಎಸ್ಎಲ್ 2018: ಎಟಿಕೆ ವಿರುದ್ಧ ಬೆಂಗಳೂರು ಎಫ್‌ಸಿ ಗೆಲುವು!
ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತಂಡ ಆರ್ಭಟ ಮುಂದುವರಿದಿದೆ. ಟೂರ್ನಿಯಲ್ಲಿ ಬಲಿಷ್ಠ ತಂಡ ಎಂದೇ ಗುರುತಿಸಿಕೊಂಡಿರುವ ಬೆಂಗಳೂರು ಎಫ್‌ಸಿ, ಕೋಲ್ಕತಾ ವಿರುದ್ಧ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ.
ಕೋಲ್ಕೊತಾ(ಅ.31): ಮಿಕು (45ನೇ ನಿಮಿಷ) ಹಾಗೂ ಎರಿಕ್ ಪಾರ್ಥಲು (47ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಎಟಿಕೆ ವಿರುದ್ಧ ಬೆಂಗಳೂರು ಎಫ್ ಸಿ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
Read the report from Bengaluru's dramatic 2-1 win over @ATKFC at the Salt Lake Stadium on our website. #KOLBEN #WeAreBFC 🔵https://t.co/loudHAAXl7
— Bengaluru FC (@bengalurufc) October 31, 2018
ಎಟಿಕೆ ಪರ ಕೋಮಲ್ ಥಟಾಲ್ 15ನೇ ನಿಮಿಷದಲ್ಲಿ ಗೋಲು ಗಳಿಸಿದರೂ ಗೆಲುವಿನ ದಡ ಸೇರಲಿಲ್ಲ. ಇಷ್ಟೇ ಅಲ್ಲ ಎಟಿಕೆ ತಂಡಕ್ಕೆ ಕೊನೆಗೂ ಬೆಂಗಳೂರು ವಿರುದ್ಧ ಜಯಗಳಿಸಲು ಸಾಧ್ಯವಾಗಲಿಲ್ಲ. ಈ ಜಯದೊಂದಿಗೆ ಒಟ್ಟು 10 ಅಂಕಗಳನ್ನು ಗಳಿಸಿದ ಬೆಂಗಳೂರು ಎಫ್ ಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಅಲಂಕರಿಸಿದೆ.
ಎಟಿಕೆ ಪಂದ್ಯ ಆರಂಭಗೊಂಡ 15ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆ ಸುಸ್ಥಿತಿಯಲ್ಲಿತ್ತು. ಆದರೆ ಬೆಂಗಳೂರು ತನ್ನ ಹೋರಾಟವನ್ನು ಮುಂದುವರಿಸಿತು. ಪ್ರಥಮಾರ್ಧ ನಮ್ಮದೇ ಮೇಲುಗೈ ಎಂದು ಎಟಿಕೆ ಯೋಚಿಸುತ್ತಿರುವಾಗಲೇ ಕೊನೆಯ 45ನೇ ನಿಮಿಷದಲ್ಲಿ ಮಿಕು ಮ್ಯಾಜಿಕ್ ಫಲಿಸಿತು.
ಈ ಬಾರಿಯ ಐಎಸ್‌ಎಲ್‌ನಲ್ಲೇ ದಾಖಲಾದ ಉತ್ತಮ ಗೋಲು ಅನ್ನೋ ಖ್ಯಾತಿಗೆ ಮೀಕು ಗೋಲು ಪಾತ್ರವಾಯಿತು. ಕಳೆದ ಬಾರಿಯ ಐಎಸ್‌ಎಲ್ ಟೂರ್ನಿಯಲ್ಲಿ ಫೈನಲ್ ತಲುಪಿದ್ದ ಬೆಂಗಳೂರು ಎಫ್‌ಸಿ, ಇದೀಗ 2018-19ರ ಆವೃತ್ತಿಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ.