ಐಎಸ್ಎಲ್ 2018: ದಿಲ್ಲಿಯ ಕೋಟೆ ಕೆಡವಲು ಎಟಿಕೆ ಸಜ್ಜು!

ಐಎಸ್ಎಲ್ ಟೂರ್ನಿ 10 ರಜಾ ದಿನಗಳ ಬಳಿಕ ಮತ್ತೆ ಆರಂಭಗೊಳ್ಳುತ್ತಿದೆ. ನಾಳೆಯಿಂದ ಐಎಸ್ಎಲ್ ಟೂರ್ನಿ ಲೀಗ್ ಪಂದ್ಯಗಳು ಮುಂದುವರಿಯುತ್ತಿದೆ. ನಾಳಿನ ಪಂದ್ಯದಲ್ಲಿ ಎಟಿಕೆ ಹಾಗೂ ಡೆಲ್ಲಿ ಡೈನಾಮೋಸ್ ಹೋರಾಟ ನಡೆಸಲಿದೆ.
 

ISL Football 2018 ATK vs Delhi dynamos preview

ದೆಹಲಿ(ಅ.16):  ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಟೂರ್ನಿಯಲ್ಲಿ ನಾಳೆ(ಅ.17) ಎರಡು ಬಾರಿ ಚಾಂಪಿಯನ್ ಎಟಿಕೆ ಹಾಗೂ ಡೆಲ್ಲಿ ಡೈನಾಮೊಸ್ ತಂಡಗಳು ಮುಖಾಮುಖಿಯಾಗುತ್ತಿದೆ. ಆದರೆ ಕಳಪೆ ಫಾರ್ಮ್‌ನಲ್ಲಿರುವ ಎಟಿಕೆ  ಆಡಿರುವ ಎರಡು ಪಂದ್ಯಗಳಲ್ಲಿ ಅಂಕವಿಲ್ಲದೆ, ಗೋಲಿಲ್ಲದೆ ಕಂಗಾಲಾಗಿದೆ. 

ಬುಧವಾರ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಡೆಲ್ಲಿ ಡೈನಮೋಸ್ ವಿರುದ್ಧದ ಪಂದ್ಯದಲ್ಲಿ ಎಟಿಕೆ ಗೆಲ್ಲುವ ಗುರಿ ಹೊಂದಿದೆ. ‘ಹಿಂದಿನ ಪಂದ್ಯದಲ್ಲಿ ಸೋಲನುಭವಿಸಿದ ನಂತರ ನಾವು ಆಟದಲ್ಲಿ ಮುಂದುವರಿಯುತ್ತಿದ್ದೇವೆ. ಕಳೆದ ಪಂದ್ಯದಲ್ಲಿ ನಾವು ಜಯ ಸಾಧಿಸಲು ಅಗತ್ಯವಿರುವ ಅವಕಾಶಗಳನ್ನು ಕಲ್ಪಿಸಿಕೊಳ್ಳಲಿಲ್ಲ. 30 ನಿಮಿಷಗಳ ಪಂದ್ಯ ಮುಗಿಯುತ್ತಿದ್ದಂತೆ ನಮ್ಮ ಆಟಗಾರರೊಬ್ಬರು ಅಂಗಣದಿಂದ ಹೊರ ನಡೆಯುವಂತಾಯಿತು ಎಂದು ತಂಡ ಕೋಚ್ ಸ್ಟೀವ್ ಕೊಪೆಲ್ ಹೇಳಿದ್ದಾರೆ. 

ಎಟಿಕೆ ತಂಡ ಮನೆಯಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 0-2 ಗೋಲುಗಳ ಅಂತರದಲ್ಲಿ ಸೋಲನುಭವಿಸಿತ್ತು. ನಂತರ ಎರಡನೇ ಪಂದ್ಯದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದಲ್ಲೂ ಸೋಲಿನ ಆಘಾತ  ಕಂಡಿತ್ತು.

ಆದರೆ ಕೋಲ್ಕೊತಾ ಮೂಲದ ತಂಡ ಮನೆಯಂಗಣದಿಂದ ಹೊರಗಡೆ ಉತ್ತಮ ಪ್ರದರ್ಶನ ತೋರಿರಲಿಲ್ಲ. ಹಿಂದಿನ ಎರಡು ಪಂದ್ಯಗಳಲ್ಲಿ ಎಟಿಕೆ ಸೋತಿತ್ತು, ಅಲ್ಲದೆ ಈಗ ಮನೆಯಂಗಣದಲ್ಲಿ ಉತ್ತಮ ದಾಖಲೆ ಹೊಂದಿರುವ ದಿಲ್ಲಿ ವಿರುದ್ಧ ಗೆಲ್ಲುವುದು ಅಷ್ಟು ಸುಲಭವಲ್ಲ. ಡೆಲ್ಲಿ ಡೈನಮೋಸ್ ತಂಡ ಮನೆಯಂಗಣದಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ಅಜೇಯವಾಗಿದೆ, ಅಲ್ಲದೆ 15 ಗೋಲುಗಳನ್ನು ಗಳಿಸಿ, ಕೇವಲ 8 ಗೋಲುಗಳನ್ನು ನೀಡಿದೆ.

ಎಟಿಕೆ ತಂಡಕ್ಕೆ ಹಳದಿ ಕಾರ್ಡ್ ಸಮಸ್ಯೆ ಎದುರಾಗಿದೆ.  ಎರಡು ಬಾರಿ ಹಳದಿ ಕಾರ್ಡ್ ಪಡೆದ ಕಾರಣ ರಾಲ್ಟೆ ಅಮಾನತುಗೊಂಡಿರುವುದರಿಂದ ಸ್ಟೀವ್ ಕೊಪ್ಪೆಲ್ ಯಾರನ್ನು ಅಂಗಣಕ್ಕಿಳಿಸುತ್ತಾರೆಂಬುದು ಕುತೂಹಲದ ಸಂಗತಿ. 

Latest Videos
Follow Us:
Download App:
  • android
  • ios