ಮುಂಬೈ(ಜ.27): ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನಲ್ಲಿ ಅಜೇಯವಾಗಿರುವ ಬೆಂಗಳೂರು ಎಫ್‌ಸಿ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. 

ಭಾನುವಾರ ಇಲ್ಲಿನ ಫುಟ್ಬಾಲ್‌ ಅರೆನಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಿಎಫ್‌ಸಿ, ಮುಂಬೈ ಸಿಟಿ ಎಫ್‌ಸಿ ವಿರುದ್ಧ ಸೆಣಸಲಿದೆ. ಎಎಫ್‌ಸಿ ಏಷ್ಯಾಕಪ್‌ ಟೂರ್ನಿಯಿಂದಾಗಿ ಐಎಸ್‌ಎಲ್‌ ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಗಿತ್ತು. 

ಲೀಗ್‌ಗೆ ಮತ್ತೆ ಚಾಲನೆ ದೊರಕಿದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಬಿಎಫ್‌ಸಿ ಹಾಗೂ 2ನೇ ಸ್ಥಾನದಲ್ಲಿರುವ ಮುಂಬೈ ನಡುವೆ ರೋಚಕ ಹಣಾಹಣಿ ನಿರೀಕ್ಷಿಸಲಾಗಿದೆ. ಬಿಎಫ್‌ಸಿ, ಈವರೆಗೂ 11 ಪಂದ್ಯಗಳನ್ನಾಡಿದ್ದು 8ರಲ್ಲಿ ಗೆಲುವು 3ರಲ್ಲಿ ಡ್ರಾ ಸಾಧಿಸಿ, 27 ಅಂಕ ಗಳಿಸಿದೆ. ಮುಂಬೈ 24 ಅಂಕ ಪಡೆದಿದೆ.