Asianet Suvarna News Asianet Suvarna News

ಐಎಸ್ಎಲ್ 2018: ಪುಣೆ ವಿರುದ್ಧ ಎಟಿಕೆಗೆ ರೋಚಕ ಗೆಲುವು!

2018ರ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲೂ ನೀರಸ ಪ್ರದರ್ಶನ ನೀಡುತ್ತಿದ್ದ ಎಟಿಕೆ ಇದೀಗ ಗೆಲುವಿನ ಹಳಿಗೆ ಮರಳಿದೆ. ಎಫ್‌ಸಿ ಪುಣೆ ಸಿಟಿ ವಿರುದ್ಧದ ಪಂದ್ಯದಲ್ಲಿ ಪುಣೆ ರೋಚಕ ಗೆಲುವು ಸಾಧಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್.

ISL 2018 Late goal help ATK secure 1-0 win against FC Pune City
Author
Bengaluru, First Published Nov 10, 2018, 10:29 PM IST

ಕೋಲ್ಕೊತಾ(ನ.10): ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ತವರಿನಲ್ಲಿ ಎಟಿಕೆ ಗೆಲುವಿ ಸಿಹಿ ಕಂಡಿದೆ.  ಗೆರ್ಸನ್ ವಿಯೆರಾ   82ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ  ಎಟಿಕೆ ತಂಡ,  ಎಫ್ ಸಿ ಪುಣೆ ಸಿಟಿ ವಿರುದ್ಧ  1-0 ಗೋಲಿನ ಅಂತರದಲ್ಲಿ ಗೆಲುವು ಸಾಧಿಸಿದೆ.

 ಪ್ರಥಮಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ಹೋರಾಟ ನಡೆಸಿತು. ಪುಣೆಗೆ ಗೋಲು ಗಳಿಸಲು ಉತ್ತಮ ಅವಕಾಶ ಕೂಡ ಎದುರಾಗಿತ್ತು. ಆದರೆ ಯಶಸ್ಸು ಸಿಗಲಿಲ್ಲ. ಗೆರ್ಸನ್ ವಿಯೆರಾ ಗೋಲ್ ಗಳಿಕೆಗಾಗಿ ನಿರಂತರ ಪ್ರಯತ್ನ ನಡೆಸುತ್ತಿದ್ದರು. ಆದರೆ ಪುಣೆ ಗೋಲ್‌ಕೀಪರ್ ಕಮಲ್‌ಜಿತ್ ಸಿಂಗ್ ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ.

82ನೇ ನಿಮಿಷದಲ್ಲಿ ಗೆರ್ಸನ್ ವಿಯೆರಾ ಸಿಡಿಸಿದ ಗೋಲು ಎಟಿಕೆ ಅಭಿಮಾನಿಗಳ ಮುಖದಲ್ಲಿ ಸಂತಸ ಮೂಡಿಸಿತು. ಗೆರ್ಸನ್ ವಿಯೆರಾ ಹೆಡರ್ ಮೂಲಕ ಈ ಬಾರಿ ಕಮಲ್‌ಜಿತ್ ಸಿಂಗ್ ಅವರನ್ನು ವಂಚಿಸಿ ಚೆಂಡನ್ನು ಗೋಲ್‌ಬಾಕ್ಸ್‌ಗೆ ತಲುಪಿಸಿದರು. ಆತಿಥೇಯ ಎಟಿಕೆ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ. ಇದೀಗ ಈ ಗೆಲುವು ತಂಡದ ಅದೃಷ್ಠ ಬದಲಾಯಿಸುವ ನಿರೀಕ್ಷೆ ಇದೆ.
 

Follow Us:
Download App:
  • android
  • ios