Asianet Suvarna News Asianet Suvarna News

ಐಎಸ್ಎಲ್ 2018: ಮುಂಬೈ ಗೆ ಆಘಾತ ನೀಡಿದ ಜೆಮ್‌ಶೆಡ್‌ಪುರ

ಐಎಸ್ಎಲ್ ಫುಟ್ಬಾಲ್ ಟೂರ್ನಿಯಲ್ಲಿಂದು ಮುಂಬೈ ಸಿಟಿ ಎಫ್‌ಸಿ ಹಾಗೂ ಜೆಮ್‌ಶೆಡ್‌ಪುರ ಎಫ್‌ಸಿ ತಂಡ ಹೋರಾಟ ನಡೆಸಿತು. ಮುಂಬೈ ಸ್ಪೋರ್ಟ್ ಅರಿನಾದಲ್ಲಿ ನಡೆದ ರೋಚಕ ಪಂದ್ಯದ ಹೈಲೈಟ್ ಇಲ್ಲಿದೆ. 

ISL 2018 Jamshedpur FC beat Mumbai City FC 2-0
Author
Bengaluru, First Published Oct 2, 2018, 9:52 PM IST
  • Facebook
  • Twitter
  • Whatsapp

ಮುಂಬೈ(ಅ.02)  ಮಾರಿಯೋ ಆರ್ಕ್‌ವೀಸ್ ಹಾಗೂ ಪ್ಯಾಬ್ಲೋ ಮೊರ್ಗದೋ  ಬಾರಿಸಿದ ಎರಡು ಗೋಲುಗಳ ನೆರವಿನಿಂದ ಜೆಮ್‌ಶೆಡ್‌ಪುರ ಎಫ್ ಸಿ  ಬಲಿಷ್ಠ ಮುಂಬೈ ಎಫ್ ಸಿ ವಿರುದ್ಧ ಗೆಲುವಿನ ನೆಗೆ ಬೀರಿದೆ. ಈ ಮೂಲಕ 5ನೇ ಆವೃತ್ತಿ ಐಎಸ್ಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. 

ಜೆಮ್ಷೆಡ್ಪುರ ಎಫ್ ಸಿ  ರಂಭದಲ್ಲೇ ಖಾತೆ ತೆರೆದು ಪ್ರಭುತ್ವ ಸಾಧಿಸಿತು. ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದ ಜೆಮ್ಷೆಡ್ಪುರಕ್ಕೆ ಅದೇ ರೀತಿ ಅವಕಾಶವೂ ಸಿಕ್ಕಿತು. 28ನೇ ನಿಮಿಷದಲ್ಲಿ ಮಾರಿಯೋ ಆರ್ಕ್‌ವೀಸ್ ಗಳಿಸಿದ ಗೋಲಿನಿಂದ ಟಾಟಾ ಪಡೆ ಯಶಸ್ಸು ಕಂಡಿತು.  

ಪ್ಯಾಬ್ಲೋ ಮೊರ್ಗದೋ 90+ ನಿಮಿದಲ್ಲಿ ಮತ್ತೊಂದು ಗೋಲು ಸಿಡಿಸಿ ಜೆಮ್‌ಶೆಡ್‌ಪುರ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.  ಮುಂಬೈ ತಂಡ ದ್ವಿತೀಯಾರ್ಧದಲ್ಲಿ ಎರಡು ಗೋಲುಗಳನ್ನು ಗಳಿಸಿದರೂ ಅದು ಆಫ್ ಸೈಡ್ ಆದ ಕಾರಣ ಸೋಲಿನಿಂದ ಪಾರಾಗಲಾಗಲಿಲ್ಲ. 5ನೇ ಆವೃತ್ತಿ ಐಎಸ್ಎಲ್ ಟೂರ್ನಿಯಲ್ಲಿ ಜೆಮ್‌ಶೆಡ್‌ಪುರ ತಂಡ 2-0 ಅಂತರದಲ್ಲಿ ಗೆಲುವು ಸಾಧಿಸಿತು.
 

Follow Us:
Download App:
  • android
  • ios