Asianet Suvarna News Asianet Suvarna News

ಐಎಸ್ಎಲ್ 2018: ಚೆನ್ನೈ ವಿರುದ್ದ ಬೆಂಗಳೂರು ಎಫ್‌ಸಿಗೆ ಗೆಲುವು

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲ ನಡೆದ 5ನೇ ಆವೃತ್ತಿ ಐಎಸ್‌ಎಲ್ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಗೆಲುವಿನ ನಗೆ ಬೀರಿದೆ.  ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ ತಂಡ ಸಾಂಪ್ರದಾಯಿಕ ಎದುರಾಳಿ ಚೆನ್ನೈ ವಿರುದ್ಧ ಗೆಲುವಿ ಸಿಹಿ ಕಂಡಿದೆ. ಪಂದ್ಯದ ಹೈಲೈಟ್ಸ್ ಇಲ್ಲಿದೆ.

ISL 2018 Bengaluru FC Win Opening Game Against Chennaiyin FC
Author
Bengaluru, First Published Sep 30, 2018, 10:14 PM IST
  • Facebook
  • Twitter
  • Whatsapp

ಬೆಂಗಳೂರು(ಸೆ.30): ಇಂಡಿಯನ್ ಸೂಪರ್ ಲೀಗ್ ಟೂರ್ನಿ 5ನೇ ಆವೃತ್ತಿಯಲ್ಲಿ ಬೆಂಗಳೂರು ಎಫ್‌ಸಿ ತಂಡ ಶುಭಾರಂಭ ಮಾಡಿದೆ. ಕಳೆದ ಬಾರಿ ಫೈನಲ್ ಪಂದ್ಯದಲ್ಲಿ ಚೆನ್ನೈಯನ್ ಎಫ್‌ಸಿ ವಿರುದ್ಧದ ಸೋಲಿಗೆ ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ತಂಡ ಸೇಡು ತೀರಿಸಿಕೊಂಡಿದೆ.

ಮೊದಲಾರ್ಧದಲ್ಲಿ ಉಭಯ ತಂಡಗಳು ರೋಚಕ ಹೋರಾಟ ನೀಡಿತು. ಆದರೆ 41ನೇ ನಿಮಿಷದಲ್ಲಿ ಬಿಎಫ್‌ಸಿ ತಂಡ ಮೀಕು ಗೋಲು ಸಿಡಿಸಿದರು. ಈ ಮೂಲಕ ಬೆಂಗಳೂರು 1-0 ಅಂತರದ ಮುನ್ನಡೆ ಸಾಧಿಸಿತು. 

ದ್ವಿತೀಯಾರ್ಧದಲ್ಲಿ ಬೆಂಗಳೂರು ಹೆಚ್ಚು ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಆದರೆ ಡಿಫೆನ್ಸ್ ಮೊರೆ ಹೋದ  ಚೆನ್ನೈಯನ್ ಮತ್ತೊಂದು ಗೋಲಿಗೆ ಅವಕಾಶ ನೀಡಿಲ್ಲ. ಪಂದ್ಯದ ಮುಕ್ತಾಯದ ವೇಲೆ ಬೆಂಗಳೂರು 1-0 ಅಂತರದ ಮುನ್ನಡೆ ಪಡೆದು ಗೆಲುವು ಸಾಧಿಸಿತು.  ಈ ಮೂಲಕ 5ನೇ ಆವೃತ್ತಿಯಲ್ಲಿ ಬೆಂಗಳೂರು ಎಫ್‌ಸಿ ತಂಡ ಶುಭಾರಂಭ ಮಾಡಿದೆ.

Follow Us:
Download App:
  • android
  • ios