ಇಂದು ಕೋಲ್ಕತ್ತಾದಲ್ಲಿ ನಡೆದ ಐಎಸ್ಎಲ್ ಉದ್ಘಾಟನಾ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಶುಭಾರಂಭ ಮಾಡಿದೆ.

ಕೋಲ್ಕತ್ತಾ, ಸೆಪ್ಟೆಂಬರ್ 29: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಪಂದ್ಯಾಟದ 5ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಶುಭಾರಂಭ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ಕೋಲ್ಕತ್ತಾದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಹಿಂದಿನ ಚಾಂಪಿಯನ್ ಎಟಿಕೆ ತಂಡದ ವಿರುದ್ಧ ಕೇರಳ ಎಫ್ ಸಿ ಭರ್ಜರಿ ಜಯಗಳಿಸಿದೆ.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ ಕೇರಳ ಬ್ಲಾಸ್ಟರ್ಸ್ ಮೊದಲಾರ್ಧದಲ್ಲಿ ಒಂದು ಗೋಲು ಬಾರಿಸಿ ಮುನ್ನಡೆ ಕಾಯ್ದುಕೊಂಡಿತು. ಸೆಕೆಂಡ್ ಆಫ್ ನಲ್ಲಿ ಮತ್ತೊಂದು ಗೋಲು ಗಳಿಸುವ ಮೂಲಕ ಕೇರಳ ಎಫ್ ಸಿ ಎಟಿಕೆಯನ್ನು 2-0 ಅಂತರದಿಂದ ಮಣಿಸಿತು.

ಕೇರಳದ ಪರ ಮಾಟೆಜ್ ಪೋಪ್ಲಾಟ್ನಿಕ್ ಹಾಗೂ ಸ್ಲಾವಿಸಾ ಸ್ಟಾಜ್ನೋವಿಕ್ ತಲಾ ಒಂದೊಂದು ಗೋಲು ಬಾರಿಸಿ ಗೆಲುವಿನ ರೂವಾರಿಯದರು.