ಐಸಿಸ್ ಪರ ಸಾಮಾಜಿಕ ಮಾಧ್ಯಮದಲ್ಲಿ ಅರ್ಜೆಂಟೀನಾದ ತಾರಾ ಫುಟ್ಬಾಲಿಗ ಲಿಯೊನೆಲ್ ಮೆಸ್ಸಿ ಅವರ ‘ರಕ್ತ ಕಣ್ಣೀರಿನ’ ಚಿತ್ರವೊಂದನ್ನು ಪ್ರಕಟಿಸಲಾಗಿದೆ.

ಮಾಸ್ಕೊ(ಅ.26): 2018 ಫಿಫಾ ಫುಟ್ಬಾಲ್ ವಿಶ್ವಕಪ್‌'ಗೆ ಇನ್ನೂ ಕೆಲ ಸಮಯ ಬಾಕಿ ಇದೆ. ಆದರೆ ಈಗಾಗಲೇ ಕಾಲ್ಚೆಂಡಿನ ಮಹಾ ಸಮರಕ್ಕೆ ಭಯೋತ್ಪಾದಕರ ಭೀತಿ ಶುರುವಾಗಿದೆ. ಭಯೋತ್ಪಾದಕ ಸಂಸ್ಥೆ ‘ಐಸಿಸ್’ ಫುಟ್ಬಾಲ್ ವಿಶ್ವಕಪ್‌'ಗೆ ಅಡ್ಡಿಯಾಗುವ ಎಚ್ಚರಿಕೆ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಸಿಸ್ ಪರ ಸಾಮಾಜಿಕ ಮಾಧ್ಯಮದಲ್ಲಿ ಅರ್ಜೆಂಟೀನಾದ ತಾರಾ ಫುಟ್ಬಾಲಿಗ ಲಿಯೊನೆಲ್ ಮೆಸ್ಸಿ ಅವರ ‘ರಕ್ತ ಕಣ್ಣೀರಿನ’ ಚಿತ್ರವೊಂದನ್ನು ಪ್ರಕಟಿಸಲಾಗಿದೆ. ಐಸಿಸ್ ಪತನಕ್ಕೆ ರಷ್ಯಾ ಹೋರಾಟ ನಡೆಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. 2015ರ ನವೆಂಬರ್'ನಲ್ಲಿ ಐಸಿಸ್ ಉಗ್ರರು ಸರಣಿ ಬಾಂಬ್ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿಶ್ವಕಪ್ ಲಾಂಛನಕ್ಕೆ ಬೆಂಕಿಯಿಟ್ಟ ಚಿತ್ರಗಳು ಸಹ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಪಂದ್ಯಾವಳಿ ವೇಳೆ ದಾಳಿ ನಡೆಸುವುದಾಗಿಯೂ ಐಸಿಸ್ ಎಚ್ಚರಿಕೆ ನೀಡಿದೆ. 2018ರ ಜೂನ್‌'ನಲ್ಲಿ ರಷ್ಯಾದ 11 ನಗರಗಳ 12 ತಾಣಗಳಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ.