ಲಂಡನ್(ಜು.23]: ಪರಿಸ್ಥಿತಿ ಈ ಮೊದಲಿನಂತೆ ಇಲ್ಲ. ಭಾರತ ತಂಡದಲ್ಲಿ 8ರಿಂದ 9 ಅದ್ಭುತ ವೇಗಿಗಳಿದ್ದು, ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಟೀಂ ಇಂಡಿಯಾದ ಹಿರಿಯ ವೇಗಿ ಇಶಾಂತ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಉಮೇಶ್ ಯಾದವ್, ಮೊಹಮ್ಮದ್ ಶಮಿ ಅವರಂತಹ ವೇಗದ ಬೌಲರ್’ಗಳಿದ್ದು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡುವುದರಲ್ಲಿ ಎರಡು ಮಾತಿಲ್ಲ. ಭಾರತ ವೇಗದ ಬೌಲರ್‌ಗಳನ್ನು ಸಜ್ಜುಗೊಳಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿತ್ತು. ಯಾವುದೇ ಸಮಯದಲ್ಲಿ ಟೆಸ್ಟ್ ಆಡುವ ಸಾಮರ್ಥ್ಯವಿರುವ 8 ರಿಂದ 9 ವೇಗದ ಬೌಲರ್‌ಗಳನ್ನು ನಾವೀಗ ಹೊಂದಿದ್ದೇವೆ ಎಂದು ಇಶಾಂತ್ ಹೇಳಿದ್ದಾರೆ.

ಭಾರತ-ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 01ರಿಂದ ಆರಂಭವಾಗಲಿದೆ.